ಹುಬ್ಬಳ್ಳಿ: ವಾಣಿಜ್ಯ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ವೈಷ್ಣುದೇವಿ ಗುಡಿಯ ಪೂಜಾರಿ ದೇವೇಂದ್ರಪ್ಪ ಹೊನ್ನಳ್ಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಹೆಡೆಮುರಿ ಕಟ್ಟಿದ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೇಟ್.
ದೇವಸ್ಥಾನದ ಪೂಜಾರಿಯ ಕೊಲೆಗೈದ ಆರೋಪಿಯನ್ನು ಕೇವಲ 24 ಘಂಟೆಯಲ್ಲಿ ಬೇಧಿಸಿ ಕೃತ್ಯ ಎಸಗಿದ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿನ್ನೆ ಅಷ್ಟೆ ಸಂಜೆ ವೈಶ್ನುದೇವಿ ದೇವಸ್ಥಾನದ ಪೂಜಾರಿಯಾಗಿದ್ಧ ದೇವೇಂದ್ರಪ್ಪ ಅವರನ್ನು ದೇವಸ್ಥಾನದ ಎದುರೆ ಚಾಕುವಿನಿಂದ ಬರ್ಬರವಾಗಿ ಚುಚ್ಚಿ ಆರೋಪಿ ತಲೆ ಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಹಂತಕನ ಪತ್ತೆಗಾಗಿ ಏಳೆಂಟು ತಂಡ ರಚಿಸಿ ದುಷ್ಕರ್ಮಿಯ ಬಂಧನಕ್ಕೆ ಬಲೆ ಬಿಸಿದ್ದ ಪೋಲಿಸ್ ಆಯುಕ್ತ ಏನ್ ಶಶಿಕುಮಾರ್ ನೇತೃದಲ್ಲಿ ಕೊನೆಗೂ ಆರೋಪಿ ಅಂದರ್ ಆಗಿದ್ದಾನೆ.
ಕೊಲೆಯ ಬೆನ್ನಲ್ಲೇ ಸಾಕಷ್ಟು ತಲೆ ಕೆಡಿಸಿಕೊಂಡಿದ್ದ ಹುಬ್ಬಳ್ಳಿ ಧಾರವಾಡ ಪೋಲಿಸ್ ಇಲಾಖೆ ಪೂಜಾರಿಯ ಹಂತಕನ್ನ ತಮ್ಮ ಖೆಡ್ಡಾಕ್ಕೆ ಕೆಡವಿದ್ದಾರೆ. ಆರೋಪಿಯು ಕಮರಿಪೇಟ್ ನಿವಾಸಿ ತಿಪ್ಪಣ್ಣ ಬೊಜಗಾರ್ ( 44 )ಯಾಗಿದ್ದು, ಪೂಜಾರಿಯ ಕೊಲೆ ಮಾಡಲು ಪ್ರಮುಖವಾದ ಕಾರಣವೇನೆಂಬುದು ಕುರಿತು ಆರೋಪಿಯ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಆರೋಪಿಯ ವಿಚಾರಣೆ ನಡೆಸಿದ ನಂತರವಷ್ಟೇ ಕೊಲೆಯ ಅಸಲೀಯತ್ತು ಹೊರಬರಬೇಕಿದೆ. ಒಟ್ಟಿನಲ್ಲಿ ಪೂಜಾರಿಯ ಹಂತಕನನ್ನು ಅತಿ ಶೀಘ್ರವೇ ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.