ಧಾರವಾಡ: ಇಲ್ಲಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ರಾತ್ರೋರಾತ್ರಿ ಅಯ್ಯಪ್ಪ ಸ್ವಾಮಿ ಹಾಗೂ ನಾಗ ದೇವರ ಮೂರ್ತಿ ಪ್ರತಿಷ್ಠಾಪನೆ ಯಾರೋ ಮಾಡಿದ್ದು, ಇದೀಗ ಪ್ರತಿಷ್ಠಾಪನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಮಾವಿನ ತೋಟದಲ್ಲಿ ಪ್ರತಿಷ್ಠಾಪನೆ ಮಾಡಿದ್ದು, ಸಾರ್ವಜನಿಕರು ನೋಡಲು ಮುಗಿಬಿದ್ದಿದ್ದಾರೆ.ಮೂರ್ತಿ ಪ್ರತಿಷ್ಠಾಪನೆ ಯಾರು ಮಾಡಿದ್ದಾರೆ. ಪ್ರತಿಷ್ಠಾಪನೆ ಮಾಡಿರುವ ಉದ್ದೇಶವೇನು? ಎಂಬದು ಮಾಹಿತಿ ಗೊತ್ತಿಲ್ಲ.
ಈ ಕುರಿತಂತೆ ಜಿಲ್ಲಾಡಳಿತವಾಗಲಿ ಅಥವಾ ಕಮೀಷನರೇಟ್ ಆಗಲಿ ಏನು ತನಿಖೆ ನಡೆಸುತ್ತೋ ಕಾದು ನೋಡಬೇಕಿದೆ.