ನವದೆಹಲಿ: ಕೇಂದ್ರ ಸರ್ಕಾರ ಶನಿವಾರ (ಜ. 11) ಜನತೆಗೆ ಗುಡ್ನ್ಯೂಸ್ ನೀಡಿದೆ. ದೇಶದ ಎಲ್ಲ 543 ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ (Passport Seva Kendra) ತೆರೆಯಲಾಗುವುದು ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ತಿಳಿಸಿದರು. ಜತೆಗೆ ಮಧ್ಯ ಪ್ರದೇಶದಲ್ಲಿ ಹೊಸದಾಗಿ 6 ಪಾಸ್ಪೋರ್ಟ್ ಕೇಂದ್ರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಮಧ್ಯ ಪ್ರದೇಶದ ಗುನಾದಲ್ಲಿ ಪಾಸ್ಪೋರ್ಟ್ ಸೇವಾ ಕಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಪ್ರತಿ ಸಂಸದೀಯ ಕ್ಷೇತ್ರದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಅಂಚೆ ಇಲಾಖೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ” ಎಂದು ಅವರು ವಿವರಿಸಿದರು. ದೇಶಾದ್ಯಂತ 6,000 ಅಂಚೆ ಕಚೇರಿಗಳನ್ನು ತೆರೆಯಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದರು.
अंतरराष्ट्रीय सेवाओं से जुड़ता गुना… ✈️
आज गुना में ‘डाकघर पासपोर्ट सेवा केंद्र’ का उद्घाटन किया। यह केंद्र गुना संसदीय क्षेत्र की जनता को त्वरित एवं सुविधाजनक पासपोर्ट सेवाएं उपलब्ध कराने में अपनी महत्वपूर्ण भागीदारी निभाएगा।
माननीय प्रधानमंत्री श्री @narendramodi जी ने… pic.twitter.com/42OmGQ1fjC
— Jyotiraditya M. Scindia (@JM_Scindia) January 11, 2025
“ದೇಶದಲ್ಲಿ ಕೈಯಿಂದ ಪತ್ರಗಳನ್ನು ಬರೆಯುವ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ನಾವು ಪ್ರಯತ್ನಿಸಬೇಕು. ಯಾಕೆಂದರೆ ಅದು ಹೃದಯದ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ” ಎಂದು ಅವರು ಹೇಳಿದರು. ಅಂಚೆ ಕಚೇರಿಗಳ ಸೇವೆಗಳಲ್ಲಿ ಹಲವು ತಾಂತ್ರಿಕ ಬದಲಾವಣೆಗಳು ನಡೆದಿವೆ ಎಂದು ತಿಳಿಸಿದರು.
ʼʼಹಿಂದೆಲ್ಲ ಗುನಾದ ಜನರು ತಮ್ಮ ಪಾಸ್ಪೋರ್ಟ್ಗಳನ್ನು ಪಡೆಯಲು ಭೋಪಾಲ್ ಮತ್ತು ಗ್ವಾಲಿಯರ್ಗೆ ಹೋಗಬೇಕಾಗಿತ್ತು. ಆದರೆ ಇದೀಗ ಪಾಸ್ಪೋರ್ಟ್ ಸೇವಾ ಕೇಂದ್ರ ಅವರ ಸಮಸ್ಯೆಗಳನ್ನು ಪರಿಹರಿಸಲಿದೆʼʼ ಎಂದು ಹೇಳಿದರು.
ಪಾಸ್ಪೋರ್ಟ್ ಸೇವಾ ಕೇಂದ್ರವು ಭಾರತದಲ್ಲಿನ ಪಾಸ್ಪೋರ್ಟ್ ಕಚೇರಿಗಳ ವಿಸ್ತೃತ ಶಾಖೆಯಾಗಿದ್ದು, ಈ ಕಚೇರಿಗಳು ಶ್ರೇಣಿ 1 ಮತ್ತು 2 ನಗರಗಳಲ್ಲಿ ಪಾಸ್ಪೋರ್ಟ್ಗಳು ಮತ್ತು ಇತರ ಸಂಬಂಧಿತ ಸೇವೆಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಪಾಸ್ಪೋರ್ಟ್ ಅಪ್ಲಿಕೇಶನ್ಗಳನ್ನು ಸುರಕ್ಷಿತ, ಪಾರದರ್ಶಕ ಮತ್ತು ತ್ವರಿತವಾಗಿಸುತ್ತದೆ. ಇಲ್ಲಿ ಪಾಸ್ಪೋರ್ಟ್ ಅಪ್ಲಿಕೇಶನ್ ಸ್ವೀಕಾರ ಮತ್ತು ವೆರಿಫಿಕೇಶನ್, ಅರ್ಹ ಅಭ್ಯರ್ಥಿಗಳಿಗೆ ಪಾಸ್ಪೋರ್ಟ್ ನೀಡುವಿಕೆ ಅಥವಾ ಮರು-ಹಂಚಿಕೆ, ಪೊಲೀಸ್ ವೆರಿಫಿಕೇಶನ್ ಮತ್ತು ಪಾಸ್ಪೋರ್ಟ್ಗಳ ಪ್ರಿಂಟಿಂಗ್ ಮತ್ತು ಅಂತಿಮ ವಿತರಣೆ ಮುಂತಾದ ಸೇವೆ ನೀಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: ವಿಮಾನದಲ್ಲಿ ಹೊಡೆದಾಟ: ವರ್ತನೆ ಸ್ವೀಕಾರಾರ್ಹವಲ್ಲ ಎಂದ ಸಚಿವ ಸಿಂಧಿಯಾ