ಮುಂಬೈ: ಜ. 16ರ ನಸುಕಿನ 2.30ರ ಸುಮಾರಿಗೆ ಮುಂಬೈಯ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸೈಫ್ ಆಲಿ ಖಾನ್ (Saif Ali Khan) ಅವರ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಚೂರಿಯಿಂದ ಇರಿದು ಪರಾರಿಯಾಗಿದ್ದ. ಒಂದಲ್ಲ ಎರಡಲ್ಲ ಸುಮಾರು 6 ಬಾರಿ ಇರಿತಕ್ಕೊಳಗಾಗಿದ್ದ ಸೈಫ್ ಆಲಿ ಖಾನ್ ಅವರನ್ನು ಕೂಡಲೇ ಸಮೀಪದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಂದೇ ಶಸ್ತ್ರ ಚಿಕಿತ್ಸೆ ನಡೆಸಿ ವೈದ್ಯರು ದೇಹದೊಳಗೆ ಸೇರಿದ್ದ ಚೂರಿಯ ತುಣಕನ್ನು ಹೊರ ತೆಗೆದಿದ್ದರು. ಸದ್ಯ ಸೈಫ್ ಆಲಿ ಖಾನ್ ಅಪಾಯದಿಂದ ಪಾರಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಘಟನೆ ನಡೆದು ಸುಮಾರು 4 ದಿನಗಳ ಬಳಿಕ ಜ. 19ರಂದು ಆರೋಪಿಯನ್ನು ಥಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಾಂಗ್ಲಾದೇಶ ಮೂಲದ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ (Mohammad Shariful Islam Shehzad) ಎಂದು ಗುರತಿಸಲಾಗಿದ್ದು, ಇದೀಗ ಆತನ ಬಗ್ಗೆ ಒಂದೊಂದೇ ವಿವರಗಳು ಹೊರ ಬೀಳುತ್ತಿದೆ (Saif Ali Khan Attack Case).
ಬಸ್ ಸ್ಟ್ಯಾಂಡ್ನಲ್ಲಿ ಮಲಗಿದ್ದ ಆರೋಪಿ
ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆಸಿದ ಬಳಿಕ ತಪ್ಪಿಸಿಕೊಂಡು ಹೊರ ಬಂದಿದ್ದ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಬಾಂದ್ರಾದ ಬಸ್ ಸ್ಟ್ಯಾಂಡ್ನಲ್ಲಿ ಬೆಳಗ್ಗೆ 7 ಗಂಟೆ ತನಕ ಮಲಗಿದ್ದ ಎಂದು ಮೂಲಗಳು ತಿಳಿಸಿವೆ.
Saif Ali Khan case :
-Real name of the accused : Md Shariful Islam Shehzad
-Nationality : Bangladeshi
-Current location: Mumbai
-New (fake) name : Vijay DasThis is truly concerning… They have identities, jobs, and are living here without any issues. pic.twitter.com/jlV3Oi9fq6
— Mr Sinha (@MrSinha_) January 19, 2025
ಬಾಂಗ್ಲಾದೇಶದ ಈತ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದು ತನ್ನ ಗುರುತನ್ನು ಮರೆಮಾಚಿದ್ದ. ಅಲ್ಲದೆ ಬಿಜೋಯ್ ದಾಸ್ ಎನ್ನುವ ಹೆಸರಿಟ್ಟುಕೊಂಡಿದ್ದ. ಬಾಂದ್ರಾದ ಸದ್ಗುರು ಶರಣ್ ಕಟ್ಟಡದಲ್ಲಿರುವ ಸೈಫ್ ಆಲಿ ಖಾನ್ ಅವರ ಮನೆಗೆ ಕಳ್ಳತನ ಮಾಡುವ ಉದ್ದೇಶದಿಂದ ನುಗ್ಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ʼʼದಾಳಿ ನಡೆಸಿ ಸೈಫ್ ಆಲಿ ಖಾನ್ ಅವರ ಮನೆಯಿಂದ ಹೊರ ಬಂದ ಆರೋಪಿ ಪಶ್ಚಿಮ ಬಾಂದ್ರಾದ ಪಟವರ್ಧನ್ ಗಾರ್ಡನ್ ಬಳಿಯ ಬಸ್ ಸ್ಟ್ಯಾಂಡ್ನಲ್ಲಿ ಬೆಳಗ್ಗೆ 7 ಗಂಟೆ ತನಕ ಮಲಗಿದ್ದ. ಬಳಿಕ ರೈಲು ನಿಲ್ದಾಣಕ್ಕೆ ತೆರಳಿ ಮಧ್ಯ ಮುಂಬೈಯ ವರ್ಲಿಗೆ ಪಲಾಯನಗೈದಿದ್ದʼʼ ಎಂದು ವಿವರಿಸಿದ್ದಾರೆ.
“ಆರೋಪಿ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ 8ನೇ ಮಹಡಿಯವರೆಗೆ ಮೆಟ್ಟಿಲು ಹತ್ತಿದ್ದ. ಬಳಿಕ ಪೈಪ್ ಬಳಸಿ 12ನೇ ಮಹಡಿಗೆ ತಲುಪಿ ಸ್ನಾನಗೃಹದ ಕಿಟಕಿಯ ಮೂಲಕ ಸೈಫ್ ಆಲಿ ಖಾನ್ ಫ್ಲಾಟ್ಗೆ ಪ್ರವೇಶಿಸಿದ್ದ. ಸ್ನಾನಗೃಹದಿಂದ ಹೊರಬಂದ ಆತನನ್ನು ಅಲ್ಲಿನ ಸಿಬ್ಬಂದಿ ಗಮನಿಸಿದರು. ಅವರ ಸಹಾಯಕ್ಕೆ ಧಾವಿಸಿದ ಸೈಫ್ ಆಲಿ ಖಾನ್ಗೆ ಇರಿದಿದ್ದಾನೆʼʼ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವೇಳೆ 1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ.
ಆತನ ಬಳಿಯಿಂದ ಸುತ್ತಿಗೆ, ಸ್ಕ್ರೂ ಡ್ರೈವರ್, ಹಗ್ಗ ಮತ್ತಿತರ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷ ಎಂದರೆ ಆತನಿಗೆ ತಾನು ದಾಳಿ ಮಾಡಿದ್ದು ಬಾಲಿವುಡ್ ನಟನ ಮನೆಗೆ ಎನ್ನುವುದು ತಿಳಿದಿರಲಿಲ್ಲವಂತೆ. ಮಾರನೇ ದಿನ ನ್ಯೂಸ್ ನೋಡಿದ ಮೇಲೆಯೇ ಆತನಿಗೆ ಈ ವಿಚಾರ ಗೊತ್ತಾಯಿತಂತೆ.
ಈ ಸುದ್ದಿಯನ್ನೂ ಓದಿ: Saif Ali Khan: ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಕೇಸ್; ಆರೋಪಿ 5 ದಿನ ಪೊಲೀಸ್ ಕಸ್ಟಡಿಗೆ
ಸದ್ಯ ಆತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆರೋಪಿ ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಹೌಸ್ ಕೀಪಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಯು ಕಳೆದ ಏಳೆಂಟು ತಿಂಗಳುಗಳಿಂದ ಮುಂಬೈ ಮತ್ತು ಥಾಣೆಯ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.