ಗೌರಿಬಿದನೂರು : ನಗರದ ಶ್ರೀ ಗೌರಿ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿವಿ ಪುರಂ 2005-2006 ರವರೆಗೆ ೧ರಿಂದ ೭ನೇ ತರಗತಿವರೆಗೆ ವ್ಯಾಸಂಗ ಮಾಡಿದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ “ಗುರುವಂದನಾ ಹಾಗೂ ಸ್ನೇಹ ಸಂಗಮ” ಕಾರ್ಯಕ್ರಮ ನಡೆಯಿತು.
“ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನಮ್ಮ ಜೀವನದಲ್ಲಿ ಅಪರಿಚಿತರಾಗಿ ಬಂದು ಚಿರಪರಿಚಿತರಾಗಿ ಶಾಶ್ವತವಾಗಿ ಕೊನೆವರೆಗೂ ನಮ್ಮೊಂದಿಗೆ ಉಳಿಯುವ ಸುಂದರ ಸಂಬAಧವೇ ಸ್ನೇಹ” ಎಂಬ ಘೋಷ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಆಗಿನ ಸುಮಾರು ೩೦ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಏಳು ಶಿಕ್ಷಕರು, ಅವರ ಕುಟುಂಬದವರು ಪಾಲ್ಗೊಂಡು ದಿನವಿಡೀ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು.
ಇದನ್ನೂ ಓದಿ: Chikkaballapur News: ಆರು ತಿಂಗಳಿಂದ ಸ್ಥಗಿತಗೊಂಡ ರಿಜಿಸ್ಟರ್ ಖಾತೆಗಳು ಪ್ರಾರಂಭ
ಶಿಕ್ಷಕರಾದ ಕೆ ಈ ಚಂದ್ರಶೇಖರ್, ವಿ ಕೃಷ್ಣಪ್ಪ, ವಿ ಎನ್ ರಾಮಚಂದ್ರ ರೆಡ್ಡಿ, ಜೆ ಚಿಕ್ಕಣ್ಣ, ಬಿ ಗಂಗು ಬಾಯಿ, ಜರೀನ, ಎಂ ಎಲ್ ಸಾವಿತ್ರಮ್ಮ ಅವರನ್ನು ೨೦೦೫-೨೦೦೬ ರ ಸಾಲಿನ ಹಳೆ ವಿದ್ಯಾರ್ಥಿ ಗಳು ಸನ್ಮಾನ ಮಾಡಿದರು.
೨೦ ವರ್ಷಗಳ ಬಳಿಕ ದೂರದ ಊರುಗಳಿಂದ ಬಂದು ತಮ್ಮದೆ ಶಾಲೆಯಲ್ಲಿ ಎಲ್ಲರೂ ಸೇರುತ್ತಿರು ವುದೇ ಒಂದು ವಿಸ್ಮಯವಾಗಿದೆ. ಅಂದು ಶಾಲೆ ಬಿಟ್ಟು ಬೇರೆ ಕಡೆ ಹೋದ ನಂತರ ಯಾರೂ ಸಂಪರ್ಕದಲ್ಲಿರಲಿಲ್ಲ. ಎಲ್ಲೆಲ್ಲೋ ಹರಿದುಹಂಚಿಹೋಗಿದ್ದೆವು. ಕಳೆದ ಒಂದು ವರ್ಷದಿಂದ ಒಬ್ಬರಿಂದೊಬ್ಬರು ಸಂಪರ್ಕಕ್ಕೆ ಬಂದು ಈಗ ಕುಟುಂಬದವರೊAದಿಗೆ ಒಟ್ಟಾಗಿ ಸೇರಿದ್ದು ಭಾರಿ ಖುಷಿ ತಂದಿದೆ. ಬಾಲ್ಯದ ದಿನಗಳನ್ನು ನೆನೆದು ಎಲ್ಲರೂ ಭಾವುಕರಾಗಿದ್ದೇವೆ ಎಂದು ಅನೇಕರು ಅಭಿಪ್ರಾಯಪಟ್ಟರು.
ಶಿಕ್ಷಕ ವೃತ್ತಿ ದೇಶದ ಭವಿಷ್ಯ, ವ್ಯಕ್ತಿಯ ಭವಿಷ್ಯ ನಿರ್ಮಿಸುವ ಶ್ರೇಷ್ಠ ವೃತ್ತಿಯಾಗಿದೆ. ಈ ಸೇವೆ ಯನ್ನು ಸಲ್ಲಿಸಲು ಕಾರಣಕರ್ತರು ವಿದ್ಯಾರ್ಥಿಗಳು ಎಂದು ಹೇಳುತ್ತಾ, ಸನ್ಮಾನಿತ ಗುರುಗಳು ತುಂಬಾ ಹರುಷದಿಂದ ಮಾತನಾಡಿದರು.
ವಿದ್ಯಾರ್ಥಿಗಳು ಪಡೆದಿರುವ ಶಿಕ್ಷಣ ಸ್ವಾರ್ಥಕ್ಕೆ ಸೀಮಿತವಾಗಿರಬಾರದು. ಅದು ಸಾಮಾಜಿಕ ಮತ್ತು ಕುಟುಂಬಿಕರ ಹಾಗೂ ಸರ್ವರ ಏಳ್ಗೆ ಹಾಗೂ ಅಭಿವೃದ್ಧಿಗೆ ಬಯಸುವ ಜ್ಞಾನವಾಗಿರಬೇಕೆಂದು ಎಂದು ಹಳೆಯ ವಿದ್ಯಾರ್ಥಿಗಳಿಗೆ ಅಂದು ಶಿಕ್ಷಕರಾಗಿದ್ದ ಕೆ ಈ ಚಂದ್ರಶೇಖರ್, ವಿ ಕೃಷ್ಣಪ್ಪ, ವಿ ಎನ್ ರಾಮಚಂದ್ರ ರೆಡ್ಡಿ, ಜೆ ಚಿಕ್ಕಣ್ಣ, ಬಿ ಗಂಗು ಬಾಯಿ, ಜರೀನ, ಎಂ ಎಲ್ ಸಾವಿತ್ರಮ್ಮ ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಭಾರತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಎಂ ನರಸಿಂಹಮೂರ್ತಿ,ಹಳೆಯ ವಿದ್ಯಾರ್ಥಿಗಳಾದ ನಂದಿನಿ, ಲತಾ ಶ್ರೀ, ಅರುಣ್, ನಾಗರಾಜ್, ಶ್ರೀಜಿತ್, ಚೇತನ್ ಪ್ರಸಾದ್, ಮೋಹ ನ್, ನವೀನ್ ಹಾಗೂ ಹಳೆ ವಿದ್ಯಾರ್ಥಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು,