
ಧಾರವಾಡ: ಕುಡಿದ ಮತ್ತಿನಲ್ಲಿ ಲಾರಿ ಚಾಲಕನೋರ್ವ ಸರಣಿ ಅಪಘಾತಪಡಿಸಿದ ಘಟನೆ ಧಾರವಾಡದ ಟೋಲನಾಕಾ ಬಳಿ ಸಂಭವಿಸಿದ್ದು, ಹಲವು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.ಜಯ ಕರ್ನಾಟಕ ಸಂಘಟನೆಯ ಪ್ರಮುಖ ಸುಧೀರ ಮುಧೋಳ, ವಕೀಲ ರವಿ ಸಿದ್ದಾಟಗಿಮಠ ಅವರಿದ್ದ ಕಾರಿಗೂ ಲಾರಿ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಇಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಅವರಿದ್ದ ಕಾರು ಜಖಂಗೊಂಡಿದೆ.ಘಟನೆಯಲ್ಲಿ ಮೂರಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಡಿದ ಮತ್ತಿನಲ್ಲಿದ್ದ ಚಾಲಕನಿಗೆ ಜನರು ಥಳಿಸಿದ್ದು,

ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ. ಟೋಲನಾಕಾ ಬಳಿ ಜನಸ್ತೋಮ ನೆರೆದಿದ್ದು, ಘಟನೆಯು ತೀವ್ರ ಆತಂಕವನ್ನ ಮೂಡಿಸಿತ್ತು.