
ಧಾರವಾಡ: SSLC ಫಲಿತಾಂಶ ಕಡಿಮೆ ಆಗಿದೆ ಎನ್ನುವ ನೆಪ ಒಡ್ಡಿ ಅನುದಾನಿತ ಪ್ರೌಢ ಶಾಲೆಗಳ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಹೊರಡಿಸಿದ ಆದೇಶವನ್ನು ತಕ್ಷಣ ವಾಪಸ ಪಡೆದು ಶಿಕ್ಷಕರು ನೆಮ್ಮದಿಯಿಂದ ಬೋದನೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಅಖಿಲ ಭಾರತ ಶಿಕ್ಷಕರ ಪೆಡರೇಷನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಸರಕಾರಕ್ಕೆ ಒತ್ತಾಯಿಸಿದ್ದಾರೆ..

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸದೆ ಬರಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಿ 2006 ರಿಂದ ನೇಮಕವಾದ ಶಿಕ್ಷಕರಗಳಿಗೆ ಹಳೇಪಿಂಚಣಿ ಯೋಜನೆ ಜಾರಿಗೆ ತರದೆ SSLC ಫಲಿತಾಂಶದ ಆಧಾರದ ಮೇಲೆ ಶಿಕ್ಷಕರ ಮೇಲೆ ಕ್ರಮ ತಗೆದುಕೊಳ್ಳುವ ಆದೇಶ ಗುಬ್ಬಿ ಮೇಲೆ ಬ್ರಹ್ಮಾಸ್ತ ಪ್ರಯೋಗಿಸದಂತೆ ಆಗಿದೆ.ಬೋದನೆ ಜೊತೆಗೆ ಬೋದಕೇತರ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತಿದ್ದಾರೆ ಇದು ಇಲಾಖೆಯೇ ನಿಗದಿಗೊಳಿಸಿದ ಕಾರ್ಯವಾಗಿದೆ. ಮೊದಲು ಬೋದಕೇತರ ಕಾರ್ಯಗಳಿಂದ ಶಿಕ್ಷಕರುಗಳನ್ನು ವಿಮುಕ್ತಿಗೊಳಿಸಬೇಕು ವಿದ್ಯಾರ್ಥಿಗಳ ಕಲಿಕಾ ಗ್ರಹಿಕೆ ವಿಭಿನ್ನವಾಗಿರುತ್ತದೆ ಇದನ್ನು ಇಲಾಖಾ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಇಲಾಖೆ ಮೊದಲು ಶಿಕ್ಷಕರುಗಳ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಸಮಸ್ಯೆಯ ಸುಳಿಯಿಂದ ಶಿಕ್ಷಕರುಗಳನ್ನು ವಿಮುಕ್ತಿ ಗೊಳಿಸಬೇಕು ಇಲಾಖೆ ತಾನು ಹೊರಡಿಸಿದ ಆದೇಶವನ್ನು ವಾಪಸ ಪಡೆಯಬೇಕೆಂದು ಅಖಿಲ ಭಾರತ ಶಿಕ್ಷಕ ರ ಪೆಡರೇಷನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಸರಕಾರಕ್ಕೆ ಒತ್ತಯಿಸಿದ್ದಾರೆ