
ಕಳೆದ ಹತ್ತು ದಿನಗಳಿಂದ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಕದನಕ್ಕೆ ಇದೀಗ ಅಮೆರಿಕಾ ಅಧಿಕೃತವಾಗಿ ಪ್ರವೇಶ ಮಾಡಿದ್ದು, ಇರಾನ್ ಮೇಲೆ ಬಾಂಬ್ ಗಳಿಂದ ದೊಡ್ಡ ಪ್ರಮಾಣದ ದಾಳಿ ನಡೆಸಿದೆ.
ಇರಾನ್ ಪರಮಾಣು ನೆಲೆ ಧ್ವಂಸಗೊಳಿಸಿದೆ ಕಳೆದ ಹತ್ತು ದಿನಗಳಿಂದ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಕದನಕ್ಕೆ ಇದೀಗ ಅಮೆರಿಕಾ ಅಧಿಕೃತವಾಗಿ ಪ್ರವೇಶ ಮಾಡಿದ್ದು, ಇರಾನ್ ಮೇಲೆ ಬಾಂಬ್ ಗಳಿಂದ ದೊಡ್ಡ ಪ್ರಮಾಣದ ದಾಳಿ ನಡೆಸಿದೆ.
ಬಿ-2 ಬಾಂಬರ್ ಫೈಟರ್ ಜೆಟ್ ಬಳಸಿ ಪೋರ್ಡೋ, ನಟಾಂಜ್, ಎಸ್ಸಹಾನ್ ಮೇಲೆ ದಾಳಿ ನಡೆಸಲಾಗಿದೆ. ಪೋರ್ಡೋ ಮೇಲೆ ಆರು ಅಮೆರಿಕನ್ ಬಾಂಬರ್ ಗಳು ದಾಳಿ ನಡೆಸಿವೆ. ನಟಾಂಜ್, ಎಸ್ಸಹಾನ್ ಮೇಲೆ ಜಲಾಂತರ್ಗಾಮಿ ನೌಕೆಯಿಂದ ದಾಳಿ ನಡೆಸಲಾಗಿದೆ.
30 ಟೋಮಾಹಾಕ್ ಕ್ಷಿಪಣಿಗಳೊಂದಿಗೆ ದಾಳಿ ನಡೆಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಅದರಲ್ಲೂ ಇರಾನ್ ನ ಮೂರು ಪ್ರಮುಖ ಪರಮಾಣು ನೆಲೆಗಳನ್ನು ಧ್ವಂಸಗೊಳಿಸಿ, ಎಲ್ಲಾ ಯುದ್ದ ವಿಮಾನಗಳು ವಾಪಾಸ್ ಆಗಿವೆ. ಇಸ್ರೇಲ್ ಅಧ್ಯಕ್ಷ ನೇತನ್ಯಾಹು ಅಮೆರಿಕಾ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಆದರೆ ಈ ನಡುವೆ ಇರಾನ್ ತಮಗೇನು ಆಗಿಲ್ಲ, ಈ ದಾಳಿಗೆ ತಕ್ಕ ಪ್ರತಿಕಾರ ನೀಡುತ್ತೇವೆ. ನಾವು ಹೆದರುವ ಪ್ರಶ್ನೇಯೇ ಇಲ್ಲ ಎಂದು ಎಚ್ಚರಿಕೆ ನೀಡಿದೆ.
ಇರಾನ್ ಅಧ್ಯಕ್ಷರಿಗೆ ನಮೋ ಕರೆ
ಈ ನಡುವೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ನಿಯಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಅಲ್ಲದೆ, ಪ್ರಸ್ತುತ ಪರಿಸ್ಥಿತಿಯ ಕುರಿತು ವಿವರ ಪಡೆದಿರುವುದಾಗಿ ತಿಳಿಸಿದ್ದಾರೆ.
ಜೊತೆಗೆ ಸಂಘರ್ಷ ಆದಷ್ಟು ಬೇಗ ಶಮನಗೊಂಡು ಶಾಂತಿ, ಭದ್ರತೆ ನೆಲೆಸಲಿ ಎಂದು ಸಲಹೆ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಮಸೂದ್ ಜೊತೆಗೆ ಮಾತನಾಡಿದ್ದು, ಪ್ರಧಾನಿಗೆ ಧನ್ಯವಾದಅರ್ಪಿಸಿದ್ದಾರೆ.