ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮಹಿಳಾ ಟಿ20ಐ ಸರಣಿಯ(INDW vs ENGW) ಮೊದಲನೇ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ನಾಯಕಿ ಸ್ಮೃತಿ ಮಂಧಾನಾ (Smriti Mandhana ಶತಕವನ್ನು ಬಾರಿಸಿದ್ದಾರೆ. ಇದು ಇವರ ಟಿ20ಐ ವೃತ್ತಿ ಜೀವನದ ಮೊದಲನೇ ಶತಕವಾಗಿದೆ. ಆ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನ ಮೂರೂ ಸ್ವರೂಪದಲ್ಲಿ ಶತಕಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ. ಇವರು ಶತಕವನ್ನು ಪೂರ್ಣಗೊಳಿಸಲು 51 ಎಸೆತಗಳನ್ನು ತೆಗೆದುಕೊಂಡಿದ್ದರು. ಇದರಲ್ಲಿ ಅವರು ಮೂರು ಸಿಕ್ಸರ್ ಹಾಗೂ 15 ಬೌಂಡರಿಗಳನ್ನು ಸಿಡಿಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಬೌಲಿಂಗ್ ವಿಭಾಗವನ್ನು ಸ್ಮೃತಿ ಮಂಧಾನಾ ಬೆಂಡೆತ್ತಿದರು.
ಇಲ್ಲಿಯವರೆಗೆ ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದರು. ಇವರು 2018 ರ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 51 ಎಸೆತಗಳಲ್ಲಿ 103 ರನ್ ಗಳಿಸಿದರು. ತಲೆಗೆ ಆದ ಗಾಯದಿಂದಾಗಿ ಹರ್ಮನ್ಪ್ರೀತ್ ಕೌರ್ ಅವರು ಹೊರಗುಳಿದ ನಂತರ ನಾಯಕತ್ವ ವಹಿಸಿಕೊಂಡಿರುವ ಸ್ಮೃತಿ ಮಂಧಾನ, ಈಗ ಟೆಸ್ಟ್, ಏಕದಿನ ಮತ್ತು ಟಿ20ಐ ಎಂಬ ಮೂರು ಅಂತಾರಾಷ್ಟ್ರೀಯ ಸ್ವರೂಪಗಳಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮುನ್ನ 2023ರಲ್ಲಿ ಐರ್ಲೆಂಡ್ ವಿರುದ್ಧ 56 ಎಸೆತಗಳಲ್ಲಿ 87 ರನ್ ಗಳಿಸಿದ್ದು ಇವರ ಅತ್ಯುತ್ತಮ ಸ್ಕೋರ್ ಆಗಿತ್ತು.
77 ರನ್ಗಳ ಜೊತೆಯಾಟದ ಮೂಲಕ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನಾ, ಶಫಾಲಿ ವರ್ಮಾ!
ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಬ್ಯಾಟ್ಸ್ವುಮೆನ್ಗಳು
ಟಾಮಿ ಬಿಮೌಂಟ್- ಇಂಗ್ಲೆಂಡ್
ಹೀದರ್ ನೈಟ್- ಇಂಗ್ಲೆಂಡ್
ಲಾರಾ ವೋಲ್ವಾರ್ಡ್- ದಕ್ಷಿಣ ಆಫ್ರಿಕಾ
ಬೆಥ್ ಮೂನಿ- ಆಸ್ಟ್ರೇಲಿಯಾ
ಸ್ಮೃತಿ ಮಂಧಾನಾ- ಭಾರತ
ಇಂಗ್ಲೆಂಡ್ ವಿರುದ್ದ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಆಟಗಾರ್ತಿಯರು
ಸ್ಮೃತಿ ಮಂಧಾನಾ: 8
ಬೆಥ್ ಮೂನಿ: 8
ಮೆಗ್ ಲ್ಯಾನಿಂಗ್: 5
ಡಿಯಾಂಡ್ರಾ ಡಾಟಿನ್: 3
ಹೇಯ್ಲಿ ಮ್ಯಾಥ್ಯೂಸ್: 3
ಡೇನ್ ವ್ಯಾನ್ ನೀಕ್: 3
📽️
🔹 First Indian batter to score a century in all three formats in women’s cricket
🔹 Highest ever T20I score for #TeamIndia in women’s cricket
A 💯 of 🔝 quality from Smriti Mandhana, and the celebrations say it all 🥳#ENGvIND | @mandhana_smriti pic.twitter.com/TQhZc4l4WD
— BCCI Women (@BCCIWomen) June 28, 2025
ಭಾರತ ತಂಡಕ್ಕೆ ದೊಡ್ಡ ಅಂತರದ ಗೆಲುವು
ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಅತಿದೊಡ್ಡ ಇನಿಂಗ್ಸ್ ಆಡಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಈ ಪಂದ್ಯದಲ್ಲಿ 5 ವಿಕೆಟ್ಗಳಿಗೆ 210 ರನ್ ಗಳಿಸಿತು. ಹರ್ಲೀನ್ ಡಿಯೋಲ್ ಕೂಡ ಕೇವಲ 23 ಎಸೆತಗಳಲ್ಲಿ 43 ರನ್ಗಳ ತ್ವರಿತ ಇನಿಂಗ್ಸ್ ಆಡಿದರು. ಅವರು 7 ಬೌಂಡರಿಗಳನ್ನು ಬಾರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಂಗ್ಲೆಂಡ್ ತಂಡವು ಈ ಗುರಿಯ ಮುಂದೆ ಆರಂಭದಿಂದಲೂ ಹೋರಾಡಿತು. ಕೊನೆಯಲ್ಲಿ, ಟೀಮ್ ಇಂಡಿಯಾ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.