
ನವಲಗುಂದ : ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲೆಯಾಗುತ್ತಿರುವವರ ಸಂಖ್ಯೆ ದಿನ ದಿನೇ ಹೆಚ್ಚುತ್ತಿರುವ ಬೆನ್ನಲ್ಲೆ ನವಲಗುಂದ ಪಟ್ಟಣದಲ್ಲಿ ಓರ್ವ ಹಾಗೂ ತಾಲ್ಲೂಕಿನ ಯಮನೂರನಲ್ಲಿ ಯೊಬ್ಬ ಹೃದಯಾಘಾತಕ್ಕೆ ಬಲಿಯಾಗಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ನವಲಗುಂದ ಪುರಸಭಾ ಮಾಜಿ ಉಪಾಧ್ಯಕ್ಷೆ ಪದ್ಮಾವತಿ ಪೂಜಾರ ಅವರ ಮಗ ಮುತ್ತುಪ್ಪ ಶಂಕ್ರಪ್ಪ ಪೂಜಾರ (44) ಸೋಮವಾರ ರಾತ್ರಿ ಮಲಗಿದಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸಹೋದರ, ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದಾರೆ.
ಇನ್ನೂ ತಾಲೂಕಿನ ಯಮನೂರ ಗ್ರಾಮದ ನಿವಾಸಿ ಡಿಶ್ ಕೇಬಲ್ ಆಪರೇಟರ ಫಕ್ಕಿರಪ್ಪ ಮಲ್ಲಪ್ಪ ಬಣಗಾರ (45 ) ಸೋಮವಾರ ರಾತ್ರಿ ಹೃದಯಘಾತ ದಿಂದ ನಿಧನಹೊಂದಿದ್ದಾರೆ ಅವರಿಗೆ ತಾಯಿ,ಪತ್ನಿ ಇಬ್ಬರು ಪುತ್ರಿಯರು ಪುತ್ರ ಇದ್ದಾರೆಅತೀ ಲವಲವಿಕೆ ಇದ್ದ ಯುವಕರಿಬ್ಬರು ಆಕಾಲಿಕ ನಿಧನದಿಂದ ನವಲಗುಂದ ಪಟ್ಟಣ ಹಾಗೂ ಯಮನೂರ ಗ್ರಾಮದಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ ಮತರ ಅತ್ಮಕ್ಕೆ ಭಗವಂತ ಚಿರುಶಾಂತಿ ಕರುಣಿಸಲಿ ಎಂದು ಸಾರ್ವಜನಿಕರು ಪ್ರಾರ್ಥಿಸಿದ್ದಾರೆ.‘ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಧುನಿಕ ಯಂತ್ರಗಳನ್ನು ಒದಗಿಸುವ ಮೂಲಕ ಇಸಿಜಿ, ಎಕೊ, ಟಿಎಂಟಿ ತಪಾಸಣೆ ಹಾಗೂ ಯುವಜನರ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಪತ್ತೆ ಮಾಡಬೇಕು’ ಎಂದು ಬಿಜೆಪಿ ಮುಖಂಡ ದೇವರಾಜ ದಾಡಿಭಾಯಿ ಒತ್ತಾಯಿಸಿದರು.

ಜನರ ಆರೋಗ್ಯ ರಕ್ಷಣೆಗಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಾನು ಮಾಡುತ್ತೇನೆ, ಸಾರ್ವಜನಿಕರು ಎದೆನೋವು, ಉಸಿರಾಟದ ತೊಂದರೆ ಕಂಡುಬಂದರೆ ಅಲಕ್ಷ್ಯ ತೋರದೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿ ಎನ್ ಎಚ್ ಕೋನರಡ್ಡಿ ಶಾಸಕರು ನವಲಗುಂದ
