ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ಧ ನಂದಿ ಬೆಟ್ಟದ ಮೇಲೆ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ್ದ ಮಯೂರ ಫೈನ್ ಟಾಫ್ ಸನ್ ರೈಸ್ ರೆಸ್ಟೋರೆಂಟ್ ಕಟ್ಟಡವನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ 50 ಕೋಟಿ ವೆಚ್ಚದ ನೂತನ ರೆಸ್ಟೋರೆಂಟ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾ ಮಯ್ಯ ಭೂಮಿ ಪೂಜೆ ನೆರವೇರಿಸಿದರು.
ನಂದಿ ಬೆಟ್ಟದಲ್ಲಿ ಬುಧವಾರ ನಡೆದ 2025 ನೇ ಸಾಲಿನ 14ನೇ ಸಚಿವ ಸಂಪುಟ ಸಭೆಗೂ ಮುನ್ನ ಭೂಮಿ ಪೂಜೆ ನೆರವೇರಿಸಿದ ಮುಖ್ಯಮಂತ್ರಿಗಳು ಪ್ರವಾಸಿಗರಿಗೆ ಗುಣಮಟ್ಟದ ಆಹಾರ ಒದಗಿಸಲು ಈ ಕಟ್ಟಡ ಆಸರೆಯಾಗಲಿದೆ ಎಂದರು.
ನೂತನ ಮಯೂರ ಫೈನ್ ಟಾಪ್ ಸನ್ ರೈಸ್ ರೆಸ್ಟೋರೆಂಟ್ ಬಹು ಮಹಡಿ ಕಟ್ಟಡವಾಗಿದ್ದು ಏಕಕಾಲಕ್ಕೆ 100 ಮಂದಿ ಒಂದೆಡೆ ಕುಳಿತು ಊಟ ಮಾಡುವ ವಿಶಾಲ ಸಭಾಂಗಣವನ್ನು ಹೊಂದಿರ ಲಿದೆ.
ಈ ರೆಸ್ಟೋರೆಂಟ್ ನ ಮೇಲ್ಭಾಗದಲ್ಲಿ ಕುಳಿತು ಸೂರ್ಯೋದಯವನ್ನು ವೀಕ್ಷಿಸಲು ಅವಕಾಶ ಆಗುವ ರೀತಿಯಲ್ಲಿ ಕಟ್ಟಡ ನಿರ್ಮಾಣ ನಡೆಯಲಿದೆ ಎಂಬುದು ಪ್ರವಾಸೋದ್ಯಮ ಇಲಾಖೆಯ
ಅಧಿಕಾರಿಗಳ ಮಾತಾಗಿದೆ.
ಒಟ್ಟಾರೆ, ಪ್ರವಾಸೋದ್ಯಮ ಇಲಾಖೆ ಉಸ್ತುವಾರಿಯಲ್ಲಿ ನಿರ್ಮಾಣವಾಗಲಿರುವ ನೂತನ ಮಯೂರ ಫೈನ್ ಟಾಪ್ ಸನ್ ರೈಸ್ ರೆಸ್ಟೋರೆಂಟ್ ಬೆಟ್ಟದ ಮೇಲೆ ಬರುವ ಪ್ರವಾಸಿಗರಿಗೆ ಆಹಾರ ವನ್ನು ಗುಣಪಡಿಸುವ ಜೊತೆಗೆ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಅವಕಾಶ ಮಾಡಿ ಕೊಡುವ ರೀತಿಯಲ್ಲಿ ನಿರ್ಮಾಣವಾಗಲಿ ಎಂಬುದೇ ಪ್ರವಾಸಿಗರ ಆಶಯವಾಗಿದೆ.