
ಗ್ರಾಂ ಅಧ್ಯಕ್ಷ ಶಿವಪ್ಪ ರಂಗಪ್ಪ ಕುಂಬಾರ ಹಾಗೂ ಪಿಡಿಓ ರಿಂದ ಅಧಿಕಾರ ದುರ್ಬಳಕೆ
ಅಧ್ಯಕ್ಷನ, ಕುಟುಂಬಸ್ಥರ ಹೆಸರಿಗೆ ಸರಕಾರಿ ಜಾಗ ವರ್ಗಾವಣೆ

ನವಲಗುಂದ : ಶಾಸಕ ಎನ್ ಎಚ್ ಕೋನರಡ್ಡಿ ಆಪ್ತ ಅಳಗವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಪ್ಪ ರಂಗಪ್ಪ ಕುಂಬಾರ ಹಾಗೂ ಪಿಡಿಒ ಸೇರಿ ನಡೆಸಿದ ಅವ್ಯವಹಾರಗಳನ್ನು ತನಿಖೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಜಿಪಂ ಸಿಇಒ ಭುವನೇಶ್ವರ ಪಾಟೀಲ್ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮನವಿ ನೀಡಿದರು..ಕೋನರಡ್ಡಿ ಆಪ್ತ ಶಿವು ಕುಂಬಾರ ಅಧ್ಯಕ್ಷ ನಂತರ ಗ್ರಾಪಂ ವ್ಯಾಪ್ತಿಯಲ್ಲಿನ ಸುಮಾರು 2 ಗುಂಟೆಗೆ ಅಧಿಕ ಖಾಲಿ ಜಾಗವನ್ನು ಗ್ರಾಪಂ ಅಧ್ಯಕ್ಷರು ತಮ್ಮ ಹಾಗೂ ತಮ್ಮ ಕಟುಂಬ ಸದಸ್ಯರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು ಕಳೇದ 2 ವರ್ಷಗಳಿಂದ ಗ್ರಾಮದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿ ನಡೆದಸೇ ಖೊಟ್ಟಿ ಬಿಲ್ ಮೂಲಕ ಕೋಟ್ಯಾಂತರ ರೂಗಳ ಅವ್ಯವಹಾರವಾಗಿದೆ ಎಂದು ದೂರಿದರು.ಮಳೆಗಾಲದ ಸಂದರ್ಭದಲ್ಲಿ ಗ್ರಾಮದ ಫಕ್ಕೀರಗೌಡ ಯಡ್ರಾವಿ ಅವರು ತಮ್ಮ ಮನೆಯ ಮುಂದಿನ ತಗ್ಗುಗಳಿಗೆ ಸ್ವಂತ ಹಣ ಖರ್ಚು ಮಾಡಿ ಮೊರಂ ಹಾಕಿದ್ದರೂ ಗ್ರಾಪಂ ಅಧಿಕಾರಿಗಳು ಗ್ರಾಪಂನಿಂದ ಕಾಮಗಾರಿ ಮಾಡಲಾಗಿದೆ ಎಂದು ಹಣ ಖರ್ಚು ಹಾಕಿ ಖೊಟ್ಟಿ ಬಿಲ್ ಸೃಷ್ಠಿಸಿದ್ದಾರೆ.

ಅಲ್ಲದೇ ಗ್ರಾಮದ ನಾನಾ ಕಡೆ ರಸ್ತೆ ಗಟಾರುಗಳ ನಿರ್ಮಾನದ ಹೆಸರಿನಲ್ಲಿ ಕೋಟ್ಯಾಂತರ ರೂಗಳ ಖೊಟ್ಟಿ ಬಿಲ್ಗಳನ್ನು ಮಾಡಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಮನವಿಯಲ್ಲಿ ವಿವರಿಸಿದ್ದಾರೆ.ಮನವಿ ಸ್ವೀಕರಿ ಮಾತನಾಡಿದ ಸಿಇಒ ಭುವನೇಶ ಪಾಟೀಲ್ ಈ ಕುರಿತಾಗಿ ತಾಪಂ ಇಒ ಅವರಿಂದ ತನಿಖೆ ನಡೆಸಲಾಗುವುದು ಸಾಧ್ಯವಾದರೆ ತಾವೇ ಖುದ್ದಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.ತಾಪಂ ಮಾಜಿ ಅಧ್ಯಕ್ಷ ಮಲ್ಲನಗೌಡ ರಾಟಿಮನಿ, ಗುರಪ್ಪ ಅವರಾದಿ, ಫಕ್ಕೀರಗೌಡ ಯಡ್ರಾವಿ,ಡಿ,ಎನ್,ಪಾಟೀಲ್, ಶಂಕರಗೌಡ ತೆಗ್ಗಿನಕೇರಿ,ಅಶೋಕ ಕಮ್ಮಾರ,ಸಾಗರ ಜೈನರ,ಹನಮಂತ ನರಗುಂದ,ಯಲ್ಲಪ್ಪ ಗಾಣಿಗೇರ ಮತ್ತಿತರರು ಜಿ ಪಂ ಸಿಇಓ ಅವರನ್ನು ಭೇಟಿ ಮಾಡಿ ತನಿಖೆ ಆಗ್ರಹಿಸಿದ್ದಾರೆ. ಅಳಗವಾಡಿ ಗ್ರಾಮದಲ್ಲಿ ಕಳೆದ 2 ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಗಳ ಅವ್ಯವಹಾರವಾಗಿದೆ, ಜತೆಗೆ ಗ್ರಾಮ ಠಾಣಾ ಜಾಗವನ್ನು ಅಧ್ಯಕ್ಷರು ತಮ್ಮ ಹಾಗೂ ಕುಟುಂಬದವರ ಹೆಸರಿಗೆ ಮಾಡಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು ಲೋಕಾಯುಕ್ತರಿಂದ ತನಿಖೆ ನಡೆಸಿದಲ್ಲಿ ಸತ್ಯ ಹೊರಬರುತ್ತದೆ ಎನ್ನುತ್ತಿದ್ದಾರೆ ಗ್ರಾಮಸ್ಥರುವಿಡಿಯೋ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಪಂನಲ್ಲಿ ನಡೆದ ಅವ್ಯವಹಾರವನ್ನು ತನಿಖೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಪಂ ಸಿಇಒ ಭುವನೇಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.





