ಧಾರವಾಡದ ಹೃದಯಭಾಗದಲ್ಲಿರುವ ದನದ ಕಸಾಯಿಕಾಣೆಯ ಸುತ್ತಮುತ್ತ ಇತ್ತೀಚೆಗೆ ಬಹಳ ಗಂಭೀರ ಪರಿಸರ ಸಮಸ್ಯೆ ಉಂಟಾಗಿದೆ. ಕಸಾಯಿಕಾಣೆಯ ಮುಂಭಾಗದಲ್ಲಿ ಗಲೇಜು, ಪ್ಲಾಸ್ಟಿಕ್, ಮಾಂಸದ ಉಳಿಕೆ, ಇತ್ಯಾದಿ ಕಸ ಎಸೆದ ಸ್ಥಿತಿ ಗಮನಕ್ಕೆ ಬಂದಿದೆ…ವಿಸ್ವೂಲ್ ಪ್ಲೋ….ಇದೊಂದೇ ಅಲ್ಲ, ಆ ಸ್ಥಳದಲ್ಲಿ ಕಸಾಯಿಕಾಣೆಗೆ ಬರುವ ದನಗಳನ್ನು ಕಟ್ಟುವ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ. ಶುದ್ಧ ನೀರಿನ ಅಭಾವ, ಆರೋಗ್ಯಕರ ಪರಿಸರದ ಕೊರತೆ, ಮತ್ತು ಕಸದ ಬದಿಯಲ್ಲಿ ಜಾನುವಾರುಗಳನ್ನು ಕಟ್ಟಿರುವ ಈ ಪರಿಸ್ಥಿತಿ, ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೂ ಅಪಾಯಕಾರಿಯಾಗಬಹುದು ಎಂಬುದು ತಜ್ಞರ ಎಚ್ಚರಿಕೆ.”ಇಲ್ಲಿಂದ ಬಂದ ವಾಸನೆ ಅಸಹನೀಯ. ಮಕ್ಕಳಿಗೆ ಆಸ್ತಿ, ಉಬ್ಬಸ, ಸೋಂಕುಗಳು ಆಗ್ತಾ ಇದೆ. ಹಲವಾರು ಬಾರಿ ನಾವು ಮನವಿ ಮಾಡಿದ್ದೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ,” ಎನ್ನುತ್ತಾರೆ ಸ್ಥಳೀಯವ ಜನ ಆರೋಪಿಸಿದ್ದಾರೆ.ಸ್ಥಳೀಯ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಸ್ವಚ್ಛ ನಗರ ಅಭಿಯಾನಗಳ ನಡುವೆ ಇಂತಹ ನಿರ್ಲಕ್ಷ್ಯಗಳು ಸದ್ಯದ ಪರಿಸರ ಚಿಂತನೆಗೆ ಪಾಠವಾಗಬೇಕಿದೆ…ಶ್ರೀನಿಧಿ ನ್ಯೂಸ್ ಧಾರವಾಡ…





