
ವಿಘ್ನ ವಿನಾಶಕನ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ, ಸಾರ್ವಜನಿಕ ಗಣಪತಿಗಳ ವಿಸರ್ಜನೆಗೆ ಪ್ರಸಿದ್ಧವಾಗಿರುವ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ಹಾಗೂ ಹೊಸೂರಿನ ಐತಿಹಾಸಿಕ ಬಾವಿಗಳನ್ನು ಪಾಲಿಕೆ ಅಧಿಕಾರಿಗಳು ಪರಿಶೀಲಿಸಿದರು.

ನಗರ ಪಾಲಿಕೆ ಆಯುಕ್ತರು ಉಪಮಹಾಪೌರರು ಸ್ಥಳಕ್ಕೆ ಭೇಟಿ ನೀಡಿ ವಿಸರ್ಜನೆ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಾವಿಗಳಲ್ಲಿದ್ದ ಹೂಳು ಮತ್ತು ಕಸವನ್ನು ಈಗಾಗಲೇ ತೆರವುಗೊಳಿಸಲಾಗುತ್ತಿದ್ದು, ತ್ವರಿತಗತಿಯಲ್ಲಿ ಶುದ್ಧೀಕರಣ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಆದೇಶಿಸಲಾಯಿತು….
ಶ್ರೀನಿಧಿ ನ್ಯೂಸ್ ಧಾರವಾಡ…





