
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ನೀಡುವ ಪ್ರತಿಷ್ಠಿತ ರಾಜ್ಯೋತ್ಸವ ಧೀಮಂತ ಪ್ರಶಸ್ತಿ 2025 ಈ ವರ್ಷ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಹಿರಿಯ ಪತ್ರಕರ್ತ ಮೆಹಬೂಬ ಮುನವಳ್ಳಿ ಅವರಿಗೆ ಘೋಷಿತವಾಗಿದೆ.ಮಾಧ್ಯಮ ಲೋಕದಲ್ಲಿ ತಮ್ಮ ನಿರಂತರ ಸೇವೆ, ನಿಷ್ಪಕ್ಷಪಾತ ವರದಿಗಳು ಮತ್ತು ಧಾರವಾಡದ ಪತ್ರಿಕೋದ್ಯಮಕ್ಕೆ ನೀಡಿದ ಅಮೂಲ್ಯ ಕೊಡುಗೆಯಿಂದ ಮೆಹಬೂಬ ಮುನವಳ್ಳಿ ಅವರು ರಾಜ್ಯದಾದ್ಯಂತ ಗುರುತಿಸಿಕೊಂಡಿದ್ದಾರೆ.

ಶಿವಳ್ಳಿಯಿಂದ ಆರಂಭವಾದ ಪತ್ರಕರ್ತಿಕ ಪಯಣ — ರಾಜ್ಯ ಮಟ್ಟದ ಮಾನ್ಯತೆಗೂ ಏರಿಕೆ!ಮೂಲತಃ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಮೂಲದ ಮುನವಳ್ಳಿ ಅವರು ಕಳೆದ ಇರಡು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.ಹುಬ್ಬಳ್ಳಿಯ ಸಿಟಿವಿ, ಉಷಾಕಿರಣ ಪತ್ರಿಕೆ, ಸಂಜೆ ದರ್ಪಣ, ಟಿವಿ9, ಜನಶ್ರೀ ಟಿವಿ ಸೇರಿದಂತೆ ಹಲವು ಖ್ಯಾತ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ.ಪ್ರಸ್ತುತ ಅವರು ಬಿಟಿವಿ ಉತ್ತರ ಕರ್ನಾಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, ಉತ್ತರ ಕರ್ನಾಟಕದ ಧ್ವನಿಯನ್ನು ರಾಜ್ಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದ್ದಾರೆ.






