
ಪ್ರಾಮಾಣಿಕತೆಯ ನಿಜ ಮುಖ” ಚಿನ್ನಕ್ಕಿಂತ ಮೌಲ್ಯವಾದದ್ದು — ಪ್ರಾಮಾಣಿಕತೆ! ಧಾರವಾಡದ ಗುಲಗಂಜಿಕೊಪ್ಪದ ಕವಿತಾ ಸೊಲ್ಲಾಪುರ ಎಂಬುವವರು ಕೊಪ್ಪದಕೇರಿ ಹತ್ತಿರ 30 ಸಾವಿರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳೆದುಕೊಂಡಿದ್ದರು.ಆದರೆ ಆಭರಣಗಳು ಸಿಕ್ಕಿದ್ದು ಧಾರವಾಡ ಆಜಾದನಗರ ನಿವಾಸಿ ಅಸ್ಲಾಂ ಯಾದವಾಡ ಅವರಿಗೆ.ಲಾಭದ ಆಸೆ ಬದಿಗಿಟ್ಟು — ಅವರು ತಕ್ಷಣ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಆಭರಣಗಳನ್ನು ಒಪ್ಪಿಸಿ ಪ್ರಾಮಾಣಿಕತೆಯ ನಿದರ್ಶನ ತೋರಿದರು. ಪೊಲೀಸರು ಆಭರಣಗಳನ್ನು ಪರಿಶೀಲಿಸಿ ನಿಜ ಮಾಲೀಕರಾದ ಕವಿತಾ ಸೊಲ್ಲಾಪುರ ಅವರಿಗೆ ಹಸ್ತಾಂತರಿಸಿದರು.ಸಾಧಾರಣ ಘಟನೆ ಎನ್ನಬಹುದು, ಆದರೆ — ಅಸ್ಲಾಂ ಯಾದವಾಡ ಅವರಂತಹವರಿಂದಲೇ ಸಮಾಜಕ್ಕೆ ನಂಬಿಕೆಯ ಬೆಳಕು ಬೀಳುತ್ತಿದೆ! “ಕಳೆದು ಹೋದ ಚಿನ್ನ ಮರಳಿ ಸಿಕ್ಕಿತು… ಆದರೆ ಅದರ ಹಿಂದೆ ಹೊಳೆಯುವುದೇ ಅಸ್ಲಾಂ ಅವರ ಪ್ರಾಮಾಣಿಕತೆ!”






