ಹುಬ್ಬಳ್ಳಿ: ಹುಟ್ಟು ಹಬ್ಬ ಬಂದರೆ ಸಾಕು ಕೇಕ್ ಕಟ್ ಮಾಡುವ ಮೂಲಕ ಗೆಳೆಯರಿಗೆ, ಆಪ್ತರಿಗೆ ಪಾರ್ಟಿ ಕೊಟ್ಟು ಆಚರಣೆ ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ತಾಯಿಯ ಆದೇಶದಂತೆ ಬಡ ಜನರಿಗೆ ದಿನ ನಿತ್ಯದ ಆಹಾರ ಬಳಕೆ ರೇಷನ್ ಕಿಟ್ಟ್ ಕೊಟ್ಟು ತನ್ನ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಕೊಂಡಿದ್ದಾನೆ.
ಹೌದು ನಗರದ ಅಂಜುಮನ್ ಸಂಸ್ಥೆಯ ಸದಸ್ಯ ದಾವೂದ್ ನದಾಫ್ ತನ್ನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ವ್ಯಕ್ತಿ. ತನ್ನ ಸುತ್ತ ಮುತ್ತಲಿನ ನೂರಾರು ಬಡ ಕುಟುಂಬಗಳಿಗೆ ಆಶ್ರಯದ ಬೆಳಕಾಗಿ, ಬೆನ್ನೆಲುಬಾಗಿ ನಿಂತಿದ್ದಾನೆ. ಈಗಿನ ಕಾಲದಲ್ಲಿ ಅದೆಷ್ಟೊ ವ್ಯಕ್ತಿಗಳು, ತಮ್ಮ ಹುಟ್ಟು ಹಬ್ಬವನ್ನು ಆಡಂಬರದಿಂದ ಆಚರಿಸಿಕೊಂಡಿದ್ದನ್ನು ನೋಡಿದ್ದೇವೆ. ಅನಾವಶ್ಯಕವಾಗಿ ಹಣವನ್ನು ವ್ಯಚ್ಯ ಮಾಡಿ, ಯಾರಿಗೂ ಉಪಯೋಗ ಆಗದ ರೀತಿಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡುವ ಬದಲು, ನಮ್ಮ ಕೈಯಲ್ಲಿ ಆದಷ್ಟು ಬಡವರಿಗೆ, ಅಸಹಾಯಕರಿಗೆ ಉಪಯೋಗ ಆಗುವ ರೀತಿಯಲ್ಲಿ ಹುಟ್ಟಿದ ಹಬ್ಬವನ್ನು ಆಚರಿಸಿ ಬದುಕಬೇಕು. ಸಾಮಾಜಿಕ ಕಾಳಜಿ ವಹಿಸಿದರೆ ನಾವು ಮಾನವರಾಗಿ ಹುಟ್ಟಿದಕ್ಕೂ ಸಾರ್ಥಕ ಅನ್ನುವ ರೀತಿಯಲ್ಲಿ ಬದುಕ ಬೇಕೆಂದು ದಾವೂದ್ ನದಾಫ್ ಹೇಳಿದ್ದಾರೆ.
ಅಂಜುಮನ್ ಸಂಸ್ಥೆಯ ಸದಸ್ಯ ದಾವೂದ್ ನದಾಫ್ ಅವರಿಗೆ ನಮ್ಮ ಸುದ್ದಿವಾಹಿನಿ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.