
ಧಾರವಾಡ: 10 ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಜುಲೈ 9 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ದ ಅಂಗವಾಗಿ ಇಂದು ಎಐಯುಟಿಯುಸಿ ಕಚೇರಿಯಲ್ಲಿ JCTU -SKM ವತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ ರದ್ದುಗೊಳಿಸಲು, ಸಾರ್ವಜನಿಕ ವಲಯಗಳು ಮತ್ತು ಸರ್ಕಾರಿ ಉದ್ಯಮಗಳ ಖಾಸಗೀಕರಣವನ್ನು ಮಾಡುವ NMPಯನ್ನು ರದ್ದುಗೊಳಿಸಲು,

ಟ್ರೇಡ್ ಯೂನಿಯನ್ ಹಕ್ಕುಗಳನ್ನು ಖಚಿತಪಡಿಸಲು, NPS / UPS ರದ್ದು ಮಾಡಿ, OPS ಜಾರಿಗೊಳಿಸಲು,ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರಾಗಿ ಖಾಯಂಗೊಳಿಸಲು, ಪ್ರತಿದಿನ ಕೆಲಸದ ಅವಧಿ 8 ಗಂಟೆ ಮೀರದಂತೆ ಖಚಿತಪಡಿಸಲು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲು ಈ ಮುಷ್ಕರ ಇದೆ.ಇದರ ಅಂಗವಾಗಿ ಬ್ಯಾಂಕ್, ವಿಮಾ, ಕೈಗಾರಿಕಾ ಕ್ಷೇತ್ರ, ಇತ್ಯಾದಿ ಎಲ್ಲ ಕಾರ್ಮಿಕರ ಮಧ್ಯೆ ಪ್ರಚಾರ ಹಮ್ಮಿಕೊಳ್ಳಲಾಗಿದೆ. ಅಂದು ಜುಲೈ 9 ರಂದು ಧಾರವಾಡದಲ್ಲಿ ಕಲಭಾವನ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು ಎಲ್ಲ ಸಂಘಟಿತ, ಅಸಂಘಟಿತ ಕ್ಷೇತ್ರದ ಎಲ್ಲ ನೌಕರರು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಯಿತು.