ಬಾಗೇಪಲ್ಲಿ: ಪಟ್ಟಣದ ಒಂದೇ ವಾರ್ಡಿನ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದ ಆವರಣದಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಕಾಂಪೌಂಡ್ ಗೋಡೆ ಹಾಗೂ ಅದರ ಮೇಲೆ ಭದ್ರತಾ ಗ್ರಿಲ್ ಹಾಕಿ ನಿರ್ಮಾಣ ಮಾಡಲು 62 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಇದನ್ನೂ ಓದಿ: Chikkaballapur News: ಭೂ ಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿ ದೇವನಹಳ್ಳಿ ಚಲೋ ಹೊರಟ ಕೆಪಿಆರ್ಎಸ್ ಸದಸ್ಯರು
ಈ ಕಾಮಗಾರಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೆರವಾಗಲು ವಿದ್ಯಾರ್ಥಿನಿಲಯ ನಿರ್ಮಿಸಲಾಗಿದ್ದು ಆದರೆ ಭದ್ರತೆ ಹಿತದೃಷ್ಟಿಯಿಂದ
ಕಾಂಪೌಂಡ್ ಗೋಡೆ ಬಾಕಿ ಕಾಮಗಾರಿಗೆ ಇಂದು ಚಾಲನೆ ನೀಡಿದ್ದು,ಕಾಮಗಾರಿಯಲ್ಲಿ ಆದಷ್ಟು ಗುಣಮಟ್ಟ ಕಾಯ್ದುಕೊಂಡು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಶೇಷಾದ್ರಿ, ವ್ಯವಸ್ಥಾಪಕ ನಾಗರಾಜು, ಪುರಸಭೆ ಉಪಾಧ್ಯಕ್ಷ ಶ್ರೀನಿವಾಸ್, ಇಓ ರಮೇಶ್ ಪುರಸಭೆ ಸದಸ್ಯ ಗಡ್ಡಂ ರಮೇಶ್, ಗಡ್ಡಂ ನರಸಪ್ಪ, ಶ್ರೀನಿವಾಸ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.