ಕಾರ್ಸೆಟ್ನಲ್ಲಿ ಕೃತಿ ಸ್ಲಿಮ್ ಲುಕ್
ಹೌದು, ಕನ್ನಡದ ಗೂಗ್ಲಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಂತರ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾದ ಕೃತಿ ಕರಬಂಧ ಹಿಂದಿಯ ವೆಬ್ ಸೀರಿಸ್ಗಳಲ್ಲೂ ನಟಿಸುತ್ತಿದ್ದು, ಈ ಸಂಬಂಧಿತ ಇವೆಂಟ್ನಲ್ಲಿ ಪಾಸ್ಟೆಲ್ ಶೇಡ್ ಕಾರ್ಸೆಟ್ನಲ್ಲಿ ಮಿಂಚಿದ್ದಾರೆ. ಗ್ಲಾಮರಸ್ ಲುಕ್ ನೀಡುವ ಆಫ್ ಶೋಲ್ಡರ್ ಕಾರ್ಸೆಟ್ ಸೂಟ್ ಇದಾಗಿದ್ದು, ಕಂಪ್ಲೀಟ್ ವೆಸ್ಟರ್ನ್ ಲುಕ್ ಅವರಿಗೆ ನೀಡಿದೆ. ಅಲ್ಲದೇ, ಸ್ಲಿಮ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.