ಬೆಂಗಳೂರು : ಭಾರತದ ಅಥ್ಲೀಟ್ ಗಳ ಹೆಮ್ಮೆಯ ಕಾರ್ಯಕ್ರಮ ನೀರಜ್ ಚೋಪ್ರಾ (Neeraj Chopra) ಕ್ಲಾಸಿಕ್ 2025ಗೆ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಕೂಡ ಕೈ ಜೋಡಿಸಿದೆ. ಇದೇ ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ ವಿಶ್ವ ಅಥ್ಲೆಟಿಕ್ಸ್ಗಳ ಕಾಂಟಿನೆಂಟಲ್ ಟೂರ್ ಆಯೋಜಿಸಿದ್ದು ಜುಲೈ 5ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗೋಲ್ಡ್ ಲೆವೆಲ್ ಜಾವೆಲಿನ್ ಸ್ಫರ್ಧೆ ಆಯೋಜನೆಗೊಂಡಿದೆ.
ಈ ಕಾರ್ಯಕ್ರಮ ಕೇವಲ ಸ್ಪರ್ಧೆಯಾಗಿರದೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುವ ಭಾರತದ ನಿರ್ಧಾರವಾಗಿದೆ. ನೀರಜ್ ಚೋಪ್ರಾ ಕ್ಲಾಸಿಕ್ 2025 ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಅಥ್ಲೀಟ್ ಗಳಾದ ಒಲಂಪಿಕ್ ಮೆಡಲ್ ವಿಜೇತ ಜೂಲಿಯಸ್ ಯೆಗೊ ಮತ್ತು ಥಾಮಸ್ ರೊಹ್ಲರ್ ಸೇರಿ ಹಲವರು ಭಾಗವಹಿಸಲಿದ್ದಾರೆ. ಇದೊಂದು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಸ್ಟಾರ್ ಆಟಗಾರರ ಜಾವೆಲಿನ್ ಕಾರ್ಯಕ್ರಮವಾಗಿದೆ.
ನೀರಜ್ ಚೋಪ್ರಾ ಬಿಪಿಸಿಎಲ್ನ ಭರವಸೆಯ ಪ್ರೀಮಿಯಂ ಪೆಟ್ರೋಲ್ ‘ಸ್ಪೀಡ್’ನ ಬ್ಯ್ರಾಂಡ್ ಅಂಬಾಸಿಡರ್ ಆಗಿದ್ದು , ವಿಶ್ವಮಟ್ಟದ ಅಥ್ಲೀಟ್ಸ್ನಿಂದ ಜಾಗತಿಕ ಐಕಾನ್ ಆಗಿರುವ ನೀರಜ್ ಚೋಪ್ರಾ ಅವರ ಈ ಪಯಣವನ್ನು ಬೆಂಬಲಿಸುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಬಿಪಿಸಿಎಲ್ನ ಬ್ಯುಸಿನೆಸ್ ಹೆಡ್ ಪರ್ ದೀಪ್ ಗೋಯಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:Neeraj Chopra: ವಿಶ್ವ ಜಾವೆಲಿನ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ನೀರಜ್
ಭಾರತದ ಕ್ರೀಡೆಗೆ ಹೊಸ ವ್ಯಾಖ್ಯಾನ ಬರೆಯುತ್ತಿರುವ ಹಾಗೂ ಭಾರತದ ಅಥ್ಲೀಟ್ಸ್ಗಳನ್ನು ಜಾಗತಿಕ ಮಟ್ಟಕ್ಕೆ ಕರೆ ದೊಯ್ಯುತ್ತಿರುವ ನೀರಜ್ ಅವರ ಧ್ಯೇಯ ಹಾಗೂ ಅವರ ನಾಯಕತ್ವವನ್ನು ನಾವು ಅಭಿನಂದಿಸುತ್ತವೆ. ವಿವಿಧ ದೇಶಗಳಿಂದ ಕಾರ್ಯ ಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಎಲ್ಲಾ ಅಥ್ಲೇಟ್ಸ್ ಗಳನ್ನು ಬಿಪಿಸಿಎಲ್ ಸ್ವಾಗತಿಸುತ್ತದೆ. ಬಿಪಿಸಿಎಲ್ 1987ರಿಂದ 200 ಪ್ರತಿಭಾವಂತ ಅಥ್ಲೀಟ್ಸ್ಗಳಿಗೆ ಅಡ್ವಾನ್ಸ್ಡ್ ತರಬೇತಿ ಹಾಗೂ ರಾಷ್ಟ್ರೀಯ ಕ್ರೀಡಾ ಸ್ಕಾಲರ್ಶಿಪ್ ಕಾರ್ಯಕ್ರಮದ ಮೂಲಕ ಬೆಂಬಲ ನೀಡಿದೆ ಎಂದರು.