ಸರ್ಜಾಪುರ, ಯಲಹಂಕ, ಮಾರತಹಳ್ಳಿ, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಿವಾಸಿಗಳ ದೂರು ಸಹ ಇದೇ ಆಗಿದೆ. “ನಾನು ಮೊದಲು ಸರ್ಜಾಪುರದಲ್ಲಿ ವಾಸವಿದ್ದೆ, ಅಲ್ಲಿ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ ಮತ್ತು ಧೂಳು ತುಂಬಾ ಎತ್ತರವಾಗಿ ಹಾರುತ್ತಿತ್ತು. ನನ್ನ ಕಚೇರಿಗೆ ಹತ್ತಿರವಿರುವುದರಿಂದ ನಾನು ಇತ್ತೀಚೆಗೆ ಬ್ಯಾಟರಾಯನಪುರಕ್ಕೆ ಸ್ಥಳಾಂತರಗೊಂಡೆ. ಇಲ್ಲಿಯೂ ಪರಿಸ್ಥಿತಿ ಹದಗೆಟ್ಟಿದೆ. ಹೆಚ್ಚಿದ ನಿರ್ಮಾಣ ಚಟುವಟಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ” ಎಂದು ಕಾರ್ಪೊರೇಟ್ ವೃತ್ತಿಪರೆ ದೇವಿಕಾ ಪಿ ಅವರು ತಿಳಿಸಿದ್ದಾರೆ.
ಇನ್ನು ಯಲಹಂಕ ನ್ಯೂ ಟೌನ್ ನಿವಾಸಿ ಜ್ಯೋತಿಕಾ ಎಸ್, ನಿರ್ಮಾಣ ಕಾಮಗಾರಿಗಳು ಹೆಚ್ಚಾಗಿ ಇಲ್ಲ. ಆದರೆ ಈ ಪ್ರದೇಶದಲ್ಲಿ ಸರಿಯಾದ ರಸ್ತೆಗಳಿಲ್ಲ. ಮಣ್ಣು ಮತ್ತು ಧೂಳು ಇದೆ. ಇದು ಪಾದಚಾರಿಗಳಿಗೆ ಮಾತ್ರವಲ್ಲದೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಸವಾರರಿಗೂ ಅಪಾಯಕಾರಿ. ಈ ಸಮಸ್ಯೆಯನ್ನು ಕೆಎಸ್ಪಿಸಿಬಿಗೆ ತಿಳಿಸಿದರೂ ಏನೂ ಪ್ರಯೋಜನೆ ಆಗಿಲ್ಲ” ಎಂದು ಹೇಳಿದರು.
ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನೀರು ಸಿಂಪಡಣೆ ವ್ಯವಸ್ಥೆಗಳಂತಹ ಧೂಳು ನಿಗ್ರಹ ವ್ಯವಸ್ಥೆಗಳನ್ನು ಮಾಡಿಕೊಂಡು ಕಾಮಗಾರಿ ನಡೆಸುವ ಮೂಲಕ ರಸ್ತೆ ಧೂಳನ್ನು ನಿಯಂತ್ರಿಸಬೇಕು ಎಂದು ನಿರ್ದೇಶಿಸಿತ್ತು. ಅಲ್ಲದೆ ಧೂಳು ಮಾಲಿನ್ಯವನ್ನು ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2018 ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಈ ಯಾವ ಆದೇಶಗಳನ್ನು ಪಾಲಿಸುತ್ತಿಲ್ಲ.
ಕೆಎಸ್ಪಿಸಿಬಿ ಅಧಿಕಾರಿಗಳು ಅಂತಹ ಆದೇಶಗಳ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಒಪ್ಪಿಕೊಂಡಿದ್ದು, “ಹಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ನಿಯಂತ್ರಣದಲ್ಲಿದೆ. ಆದಾಗ್ಯೂ, ಶುಷ್ಕ ದಿನಗಳಲ್ಲಿ, ಸಿಬ್ಬಂದಿ ಕೊರತೆಯಿಂದಾಗಿ ನಾವು ಎಕ್ಯೂಐ ಪರಿಶೀಲಿಸಲು ಸಾಧ್ಯವಾಗುವುದಿಲ್ಲ” ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಕೆಎಸ್ಪಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.