[ad_1]
ಭಾರತದ ಪ್ರಮುಖ ಆಟೋಮೊಬೈಲ್ ತಯಾರಕರಾದ ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ ನ ಅಂಗಸಂಸ್ಥೆ ಆಗಿರುವ, ಭಾರತದ ಶುದ್ಧ ಶಕ್ತಿ ಬದಲಾವಣೆಯಲ್ಲಿ ಮುಂಚೂಣಿಯಲ್ಲಿ ರುವ ಕಂಪನಿ ಟಾಟಾ ಪವರ್ ರಿನೀವೀಬಲ್ ಎನರ್ಜಿ ಲಿಮಿಟೆಡ್ (ಟಿಪಿಆರ್ಇಎಲ್) ಸಂಸ್ಥೆಗಳು 131 ಮೆಗಾ ವ್ಯಾಟ್ ವಿಂಡ್-ಸೋಲಾರ್ ಹೈಬ್ರಿಡ್ ಶಕ್ತಿ ಯೋಜನೆಯನ್ನು ಒಟ್ಟಿಗೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ವಿದ್ಯುತ್ ಖರೀದಿ ಒಪ್ಪಂದಕ್ಕೆ (ಪಿಪಿಎ) ಸಹಿ ಹಾಕಿವೆ.
ಈ ಯೋಜನೆಯ ಮೂಲಕ ಪ್ರತೀವರ್ಷ ಸುಮಾರು 300 ಮಿಲಿಯನ್ ಯೂನಿಟ್ ಗಳಷ್ಟು ಶುದ್ಧ ವಿದ್ಯುತ್ ಉತ್ಪಾದಿಸಲಾಗುತ್ತದೆ ಮತ್ತು ಪ್ರತಿವರ್ಷ 2 ಲಕ್ಷ ಟನ್ಗಿಂತಲೂ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲಾಗುತ್ತದೆ. ಸಹ ಹೂಡಿಕೆ (ಕೋ ಇನ್ವೆಸ್ಟ್ ಮೆಂಟ್) ಮತ್ತು ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದದ ಮೂಲಕ ಸಿದ್ಧಗೊಳ್ಳಲಿರುವ ಈ ವಿಂಡ್-ಸೋಲಾರ್ ಯೋಜನೆಯ ಮೂಲಕ ಟಾಟಾ ಮೋಟಾರ್ಸ್ ನ ಮಹಾರಾಷ್ಟ್ರ ಮತ್ತು ಗುಜರಾತ್ ನ ಆರು ಉತ್ಪಾದನಾ ಘಟಕಗಳಿಗೆ ವೆಚ್ಚ-ಪರಿಣಾಮಕಾರಿ ವಿದ್ಯುತ್ ಶಕ್ತಿಯನ್ನು ಒದಗಿಸ ಲಾಗುತ್ತದೆ. ಈ ಮೂಲಕ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳ ಉತ್ಪಾದನೆಗೆ ಬೆಂಬಲ ನೀಡಲಾಗುತ್ತದೆ.
ಇದನ್ನೂ ಓದಿ: Tata Motors: ಅತಿ ಹೆಚ್ಚು ಪೇಟೆಂಟ್ ದಾಖಲಾತಿ ಮೂಲಕ ಆರ್ಥಿಕ ವರ್ಷ 25ರಲ್ಲಿ ಹೊಸ ದಾಖಲೆ ಮಾಡಿದ ಟಾಟಾ ಮೋಟಾರ್ಸ್
ಈ ಯೋಜನೆಯು ಟಾಟಾ ಮೋಟಾರ್ಸ್ ನ ಶುದ್ಧ ಶಕ್ತಿ ಬದಲಾವಣೆ ಪ್ರಕ್ರಿಯೆಗೆ ವೇಗ ಒದಗಿಸ ಲಿದ್ದು, 2030ರ ಮುಂಚೆಯೇ ಆರ್ಇ-100 ಗುರಿಯನ್ನು ಸಾಧಿಸಲು ನೆರವಾಗಲಿದೆ. ಜೊತೆಗೆ ಹವಾಮಾನ ಸ್ನೇಹಿ ಕಾರ್ಯಾಚರಣೆಗಳ ವಿಚಾರದಲ್ಲಿ ಗಣನೀಯ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ. ಟಾಟಾ ಮೋಟಾರ್ಸ್ನ ಸುಸ್ಥಿರತಾ ಯೋಜನೆಯಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುವ ಮತ್ತು ಜವಾಬ್ದಾರಿ ಯುತ ಉತ್ಪಾದನೆಯನ್ನು ಆಗುಗೊಳಿಸಿ ಪರಸರಕ್ಕೆ ಒಳಿತು ಮಾಡುವ ಕಡೆಗೆ ಮುನ್ನಡೆಯುವ ಅದರ ವಿಶಾಲ ಗುರಿಗೆ ಪೂರಕವಾಗಿ ಮೂಡಿ ಬಂದಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನಗಳ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷರಾದ ವಿಶಾಲ್ ಬಾದ್ ಷಾ ಅವರು, “ಭಾರತದ ಸಾರಿಗೆ ಮತ್ತು ಸರಕು ಸಾಗಾಣಿಕಾ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳು ಸುಸ್ಥಿರ ಉತ್ಪಾದನೆ ವಿಚಾರದಲ್ಲಿ ಇತರರಿಗೆ ಮಾದರಿಯಾಗಿರಲು ಹೆಮ್ಮೆಪಡುತ್ತದೆ. ಈ ಯೋಜನೆಯು ನಮ್ಮ ಕಾರ್ಯಾಚರಣೆಗಳಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಸಂಯೋಜಿಸುವ ಮತ್ತು ಕಾರ್ಬನ್ ಹೆಜ್ಜೆಗುರುತನ್ನು ಕಡಿಮೆ ಮಾಡುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ಜೊತೆಗೆ ಆರ್ಇ-100 ಗುರಿ ಸಾಧನೆಗೆ ಪೂರಕವಾಗಿ ಮೂಡಿ ಬಂದಿದೆ. ಇದು ಉತ್ಪಾದನೆಯಿಂದ ಕಾರ್ಯಕ್ಷಮತೆವರೆಗೆ ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ವಿಶಾಲ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಪ್ರಮೋದ್ ಚೌಧರಿ ಅವರು , “ಭವಿಷ್ಯಕ್ಕೆ ಸಿದ್ಧವಾದ ಆಟೋಮೊಬೈಲ್ ಉದ್ಯಮವನ್ನು ರೂಪಿಸುವ ನಿಟ್ಟಿನಲ್ಲಿ ಶುದ್ಧ ಶಕ್ತಿಗೆ ಬದಲಾವಣೆ ಹೊಂದಲು ನಾವು ಬದ್ಧರಾಗಿದ್ದೇವೆ. ಈ ಒಪ್ಪಂದದ ಮೂಲಕ ಮಹಾರಾಷ್ಟ್ರ ಮತ್ತು ಗುಜರಾತ್ ನ ನಮ್ಮ ಘಟಕಗಳು ಭಾರತದ ಹಸಿರು ಬದಲಾವಣೆಗೆ ಪೂರಕ ವಾಗಿ ಹಸಿರು ಉತ್ಪಾದನೆಯ ಕಡೆಗೆ ಗಣನೀಯ ಹೆಜ್ಜೆಯನ್ನು ಇಡುತ್ತವೆ. ಇದು ನಮ್ಮ ಪ್ರಯಾಣಿಕ ವಾಹನ ಕಾರ್ಯಾಚರಣೆಗಳನ್ನು ಹಸಿರು, ಸ್ಮಾರ್ಟ್ ಮತ್ತು ಸುಸ್ಥಿರ ಆಧಾರದ ಮೇಲೆ ಹೆಚ್ಚು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಬಹಳ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.
[ad_2]
Source link