[ad_1]
ಪಶ್ಚಿಮ ಆಫ್ರಿಕಾ: ರೈಲು ಪ್ರಯಾಣ (Train journey)ಅಂದರೆ ಹೆಚ್ಚಿನವರಿಗೆ ಇಷ್ಟ. ಕಿಟಕಿಯ ಪಕ್ಕ ಕುಳಿತು ಸುತ್ತಲಿನ ಪರಿಸರವನ್ನು ವೀಕ್ಷಿಸುತ್ತಾ, ಬಿಸಿ ಬಿಸಿ ಚಹಾ ಸವಿಯುತ್ತಾ ಪ್ರಯಾಣಿಸುವ ಆ ಸುಮಧುರ ಅನುಭವ ಬಹುತೇಕರು ಇಷ್ಟ ಪಡುತ್ತಾರೆ. ಆದರೆ ಇದರ ಹೊರತು ರೈಲು ಪ್ರಯಾಣವನ್ನು ವಿಭಿನ್ನ ರೀತಿಯಲ್ಲಿ ಪ್ರಯಾಣ ಮಾಡಲು ಬಯಸುವವರಿಗೆ ಅಂತಹ ರೈಲು ಸೇವೆ ಕೂಡ ಇರಲಿದೆ ಎಂದರೆ ನಿಮಗೂ ಆಶ್ಚರ್ಯ ಆಗಬಹುದು. ಯಾವುದೇ ಆಸನಗಳು, ಚಾವಣಿಗಳು, ಯಾವುದೇ ನಿಲ್ದಾಣಗಳು ಇಲ್ಲದ ಈ ರೈಲೊಂದು 704 ಕಿಲೋ ಮೀಟರ್ ಪ್ರಯಾಣಿ ಸುತ್ತದೆ. ಸುಡುವ ಸಹರಾ ಮರು ಭೂಮಿಯಲ್ಲಿಯೂ ರೂಫ್ ರಹಿತವಾಗಿ ಚಲಿಸುವ ಈ ರೈಲಿನ ಬಗ್ಗೆ ಅನೇಕ ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿದೆ.
ವಿಶ್ವದ ಅತಿ ಉದ್ದದ, ಭಾರವಾದ ಮತ್ತು ಅತ್ಯಂತ ಅಪಾಯಕಾರಿ ರೈಲು ಸಂಚಾರಗಳಲ್ಲಿ ಪಶ್ಚಿಮ ಆಫ್ರಿಕಾದ ಮೌರಿ ಟೇನಿಯಾದ ಕಬ್ಬಿಣದ ಅದಿರು ಸಾಗಿಸುವ ರೈಲು ಕೂಡ ಒಂದಾಗಿದೆ. ಈ ರೈಲು ಸೇವೆಯನ್ನು 1963 ರಿಂದ ಆರಂಭಿಸ ಲಾಗಿದೆ. ಇದನ್ನು ಜನರಿಗಾಗಿ ನಿರ್ಮಿಸಲಾಗಿಲ್ಲ ಬದಲಾಗಿ ಕಬ್ಬಿಣದ ಅದಿರನ್ನು ಸಾಗಿಸುವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ಬೃಹತ್ ಪ್ರಮಾಣದ ಕಬ್ಬಿಣದ ಅದಿರನ್ನು ಹೊತ್ತುಕೊಂಡು ಸಹಾರಾ ಮರುಭೂಮಿಯ ಬಿಸಿಯ ನಡುವೆಯೂ ತಡೆರಹಿತವಾಗಿ ಈ ರೈಲು ಚಲಿಸುತ್ತದೆ ಗಣಿಗಾರಿಕೆ ಪಟ್ಟಣವಾದ ಝೌರಾಟ್ನಿಂದ ಅಟ್ಲಾಂಟಿಕ್ ಕರಾವಳಿಯ ಬಂದರು ನಗರವಾದ ನೌಧಿಬೌಗೆ ಅದಿರನ್ನು ಸಾಗಿಸಲು, ಒಂದು ವಿಶೇಷ ರೈಲು ಅವಶ್ಯಕವಿದ್ದು ಬಹಳ ಹಿಂದಿನಿಂದಲೂ ಇಲ್ಲಿದೆ.
ಮೌರಿಟೇನಿಯಾ ರೈಲು ನಮಗೆ ತಿಳಿದಿರುವ ಸಾಮಾನ್ಯ ರೈಲಿಗಿಂತ ಬಹಳ ವಿಭಿನ್ನವಾಗಿದೆ. ಈ ರೈಲಿನಲ್ಲಿ ಆಸನಗಳು, ಛಾವಣಿಯೂ ಇಲ್ಲ. 704 ಕಿಲೋಮೀಟರ್ ಪ್ರಯಾಣಿಸುತ್ತದೆ, ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು ಸುಮಾರು 14 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ರೈಲಿನಲ್ಲಿ 200 ಕ್ಕೂ ಹೆಚ್ಚು ಸರಕು ವ್ಯಾಗನ್ಗಳಿಂದ ಮಾಡಲ್ಪಟ್ಟಿದ್ದು ಪ್ರತಿ ಯೊಂದರಲ್ಲಿಯೂ 84 ಟನ್ ಕಬ್ಬಿಣದ ಅದಿರನ್ನು ತುಂಬಿರುತ್ತದೆ. ಹೀಗಾಗಿ ಈ ರೈಲನ್ನು ಸ್ಥಳೀಯರು ಇದನ್ನು ಟ್ರೈನ್ ಡು ಡೆಸರ್ಟ್ ಅಂದರೆ ಮರುಭೂಮಿಯ ರೈಲು ಎಂದು ಕರೆಯುತ್ತಾರೆ.
ಟಿಕೆಟ್ ಇಲ್ಲ!
ಈ ರೈಲಿನಲ್ಲಿ ಆಸನ, ಚಾವಣಿ ಜೊತೆಗೆ ಟಿಕೆಟ್ ಕೂಡ ಇಲ್ಲ. ಕೆಲವು ಮಾರಿಟಾನಿಯನ್ ಸ್ಥಳೀಯರು ಉಚಿತವಾಗಿ ಈ ರೈಲಿನಲ್ಲಿ ಟಿಕೆಟ್ರಹಿತ ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರು ಕಬ್ಬಿಣದ ಅದಿರಿನ ಮೇಲೆಯೇ ಕುಳಿತು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸ್ಕಾರ್ಫ್ಗಳನ್ನು ಸುತ್ತಿಕೊಂಡು ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣಿಸುವ ಪ್ರಯಾಣಿಕರಿಗೆ ನಡುವೆ ನಿಲ್ದಾಣವಿಲ್ಲ, ಆಹಾರವಿಲ್ಲ, ನೀರಿಲ್ಲ. ಏನಾದರೂ ಆಘಾತವಾದರೂ ಸಹಾಯಕ್ಕೂ ಯಾರು ಬರುವವರಿಲ್ಲ. ಆದರೂ, ಜನರು ಇದರ ಮೇಲೆ ಸವಾರಿ ಮಾಡುತ್ತಾರೆ. ಏಕೆಂದರೆ ಮೌರಿಟೇನಿಯಾದ ಕೆಲವು ಸ್ಥಳಗಳಿಗೆ ಹೋಗಬೇಕಾದರೆ ಇದು ಏಕೈಕ ಕೈಗೆಟುಕುವ ಮಾರ್ಗವಾಗಿದೆ.
ಇದನ್ನು ಓದಿ: Viral Video: ನಮಗೇನೂ ಮಾಡಬೇಡಿ.. ಸೈನಿಕರನ್ನು ಉಗ್ರರೆಂದು ಭಾವಿಸಿ ಪ್ರಾಣ ಭಿಕ್ಷೆ ಬೇಡಿದ ಮಹಿಳೆ
ಅಪಾಯದ ಹಾದಿ
ಬೇಸಿಗೆಯಲ್ಲಿ ಮೌರಿಟೇನಿಯಾದ ತಾಪಮಾನವು 50°C ಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ರೈಲು ಪ್ರಯಾಣದ ವೇಳೆ ಮರಳು ಬಿರುಗಾಳಿಗಳು ಸಂಭವಿಸುವ ಅಪಾಯವಿದೆ. ಅಷ್ಟು ಮಾತ್ರವಲ್ಲದೆ ಪಶ್ಚಿಮ ಸಹಾರಾ ಗಡಿಯಲ್ಲಿರುವ ಝೌರಾತ್ ಎಂಬ ಪಟ್ಟಣದಿಂದ ಅಲ್-ಖೈದಾ ಅಂಗಸಂಸ್ಥೆಗಳು ಸೇರಿದಂತೆ ಸಶಸ್ತ್ರ ಗುಂಪುಗಳು, ಭಯೋತ್ಪಾದಕ ಚಟುವಟಿಕೆಗಳಿಗೆ ಹೆಸರುವಾಸಿಯಾದ ಪ್ರದೇಶದ ಮೂಲಕವೂ ಈ ರೈಲು ಸಾಗಿ ಹೋಗುತ್ತದೆ. ಹೀಗಾಗಿ ಈ ಮಾರ್ಗದಲ್ಲಿ ಹೋಗುವಾಗ ಏನಾದರೂ ಸಂಭವಿಸಿದಲ್ಲಿ, ಹತ್ತಿರದಲ್ಲಿ ಯಾವುದೇ ರಕ್ಷಣಾ ತಂಡಗಳು ಸಹ ಇರಲಾರದು. ಹಾಗಾಗಿ ಇದನ್ನು ಅಪಾಯಕಾರಿ ರೈಲು ಎಂದು ಸಹ ಕರೆಯುತ್ತಾರೆ.
[ad_2]
Source link