[ad_1]
ಬೀಜಿಂಗ್: ಮಕ್ಕಳಿಗಾಗಿ ಪೋಷಕರು ಏನು ಬೇಕಾದರು ಮಾಡಲು ಸಿದ್ಧ ಇರುತ್ತಾರೆ. ಆದರೆ ಬದಲಾದ ಈ ಆಧುನಿಕ ಕಾಲಘಟ್ಟದಲ್ಲಿ ಪತಿ ಪತ್ನಿ ಇಬ್ಬರೂ ಕೂಡ ಕೆಲಸ ನಿಮಿತ್ತ ಹೆಚ್ಚು ಸಮಯ ವ್ಯಯಿಸುವ ಕಾರಣ ಕೌಟುಂಬಿಕ ಮೌಲ್ಯಗಳು ನಶಿಸುತ್ತಿವೆ ಎನ್ನುವ ಆರೋಪವೂ ಇದೆ. ಅದರಲ್ಲೂ ಮದುವೆಯಾಗಿ ಮಕ್ಕಳಾದ ಮೇಲೆ ಇಬ್ಬರು ದುಡಿಮೆಗೆ ಪ್ರಾಮುಖ್ಯತೆ ನೀಡಲು ಹೋಗಿ ಮಗುವಿನ ಲಾಲನೆ ಪಾಲನೆಯನ್ನು ಕಡೆಗಣನೆ ಮಾಡಿ ಬಿಡುತ್ತಾರೆ. ಈ ನಿಟ್ಟಿನಲ್ಲಿ ವ್ಯಕ್ತಿಯೊಬ್ಬ ತನ್ನ ಮಗುವಿನ ಪಾಲನೆಗಾಗಿ 2.5 ಲಕ್ಷ ರೂಪಾಯಿ ಗಳಿಕೆ ಮಾಡುತ್ತಿದ್ದ ಉದ್ಯೋಗವನ್ನೇ ತೊರೆದಿದ್ದಾರೆ ಎಂದರೆ ಈ ವಿಚಾರ ನಿಮಗೂ ಆಶ್ಚರ್ಯವೆನಿಸುತ್ತದೆ. ಮಗುವಿಗಾಗಿ ಸಮಯ ನೀಡಲು ಈ ನಿರ್ಣಯವನ್ನು ವ್ಯಕ್ತಿ ತೆಗೆದುಕೊಂಡಿದ್ದು, ಇದೇ ನಿರ್ಣಯ ದಾಂಪತ್ಯ ಜೀವನದಲ್ಲಿ ವೈ ಮನಸ್ಸು ಮೂಡಿ ಡಿವೋರ್ಸ್ ಹಂತ ತಲುಪುವಂತೆ ಮಾಡಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ (Viral News). ತನ್ನ ಮಗಳಿಗಾಗಿ ಗಂಡ, ಉದ್ಯೋಗ ತೊರೆದದ್ದಕ್ಕೆ ಪತ್ನಿಗೆ ಸಮಸ್ಯೆ ಆಯಿತಾ? ನಿಜಕ್ಕೂ ಅಲ್ಲಿ ಆಗಿದ್ದೇನು?
ಇಂದು ಜೀವನದಲ್ಲಿ ಉದ್ಯೋಗ ಪ್ರತಿಯೊಬ್ಬರಿಗೂ ಬಹಳ ಅಗತ್ಯವಿದೆ. ಅದರಲ್ಲಿಯೂ ಸರ್ಕಾರಿ ಉದ್ಯೋಗ ಮತ್ತು ಲಕ್ಷ ಗಟ್ಟಲೆ ಸಂಬಳ ಬರುವ ಉದ್ಯೋಗ ತೊರೆಯಲು ಹೆಚ್ಚಿನವರು ಹಿಂಜರಿಯುತ್ತಾರೆ. ಅಂತೆಯೇ ಸಾಕುಪ್ರಾಣಿಗಳ ಆಹಾರ ಮಾರಾಟ ಮಾಡುವ ಕಂಪನಿಯ ವ್ಯವಸ್ಥಾಪಕ ಉದ್ಯೋಗಿ ಒಬ್ಬರು ತನ್ನ ಮಗುವಿಗಾಗಿ ಉದ್ಯೋಗ ತೊರೆಯುವ ಮೂಲಕ ಮಹಾ ತ್ಯಾಗವನ್ನೇ ಮಾಡಿದ್ದಾರೆ. ಆತನ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು ಹೆರಿಗೆ ನಂತರ ರಜೆ ಮುಗಿಸಿ ಬಳಿಕ ಪುನಃ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇತ್ತ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರು ಇಲ್ಲದಾಗಿತ್ತು. ಹೀಗಾಗಿ ಮಗುವಿಗಾಗಿ 2.5 ಲಕ್ಷ ರೂ. ವೇತನ ಸಿಗುತ್ತಿದ್ದ ಉದ್ಯೋಗ ತೊರೆದು ತಂದೆಯ ಕರ್ತವ್ಯ ನಿಭಾಯಿಸಲು ಅಣಿಯಾದ ಘಟನೆ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ.
ಸಾಮಾನ್ಯವಾಗಿ ಸ್ತ್ರೀಯರು ಪುರುಷರಿಗಿಂತ ಹೆಚ್ಚು ಮಗುವಿನ ಬಗ್ಗೆ ವಿಶೇಷ ಮಮತೆ ಪ್ರೀತಿ, ವಾತ್ಸಲ್ಯದ ಬಂಧ ಇರುತ್ತದೆ. ಆದರೆ ಇಲ್ಲಿ ತಾಯಿಗಿಂತಲೂ ತಂದೆ ಬಹಳ ಗ್ರೇಟ್ ಎನಿಸಿಕೊಂಡಿದ್ದಾರೆ. ಪತ್ನಿ ನವಜಾತ ಶಿಶುವನ್ನು ನೋಡಿಕೊಳ್ಳಲು ಪತಿಗೆ ಜವಾಬ್ದಾರಿ ವಹಿಸಿದ್ದಾರೆ. ಪತಿಗೆ ಅತ್ತ ಆಫೀಸ್ ಕೆಲಸ ಇಲ್ಲಿ ಮಗುವಿನ ಆರೈಕೆ ಎರಡು ಮಾನಸಿಕ ಖಿನ್ನತೆ ಸಮಸ್ಯೆ ಉಂಟಾಗುವಂತೆ ಮಾಡಿದೆ. ಹೀಗಾಗಿ ಎರಡಲ್ಲಿ ಒಂದನ್ನು ಮಾತ್ರವೇ ಮಾಡಿದರೆ ಉತ್ತಮ ಎಂಬ ಕಾರಣಕ್ಕೆ ಉದ್ಯೋಗ ತೆರೆಯುವ ನಿರ್ಣಯವನ್ನು ಅವರು ಕೈಗೊಂಡಿದ್ದಾರೆ. ಆದರೆ ಲಕ್ಷಾಂತರ ಹಣ ಬರುವ ಉದ್ಯೋಗ ತೊರೆದಿದ್ದಕ್ಕೆ ಪತ್ನಿಯ ವಿರೋಧವಿತ್ತು. ಹೀಗಾಗಿ ಇಬ್ಬರ ನಡುವೆ ಸಾಕಷ್ಟು ವೈಮನಸ್ಸು ಜಗಳ ಏರ್ಪಟ್ಟು ಅಂತಿಮವಾಗಿ ಇಬ್ಬರು ವಿಚ್ಛೇದನ ಪಡೆದು ದೂರಾಗುವ ನಿರ್ಣಯಕ್ಕೆ ಬಂದಿದ್ದಾರೆ.
ಇದನ್ನು ಓದಿ: Viral Video: ಮದ್ವೆಯ ಜೋಶ್ನಲ್ಲಿ ಈ ವ್ಯಕ್ತಿ ಮಾಡಿದ ಕೆಲ್ಸವನ್ನೊಮ್ಮೆ ನೋಡಿ; ವಿಡಿಯೊ ವೈರಲ್
ವಿಚ್ಚೇದನದ ಬಳಿಕ ಆ ವ್ಯಕ್ತಿಯೇ ಮಗುವಿನ ಜವಾಬ್ದಾರಿ ಹೊತ್ತಿದ್ದು ಮಗುವಿನ ಆರೈಕೆಗೆ ಹಾಗೂ ತನ್ನ ನಿತ್ಯ ಖರ್ಚುಗಳಿಗಾಗಿ ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ಯೋಗಕ್ಕೆ ಸೇರಿಕೊಂಡು ತಿಂಗಳಿಗೆ 46,000 ರೂ. ಗಳಿಕೆ ಮಾಡುತ್ತಿದ್ದಾರೆ. ಈ ಆದಾಯ ಈ ಹಿಂದಿನ ಉದ್ಯೋಗಕ್ಕೆ ಹೋಲಿಸಿದರೆ ಬಹಳ ಕಡಿಮೆ ಮೊತ್ತವಾಗಿದ್ದರೂ ಮಗುವಿಗಾಗಿ ಇಷ್ಟೆಲ್ಲ ತ್ಯಾಗ ಮಾಡುವ ತಂದೆಯ ಪ್ರೀತಿಗೆ ನೆಟ್ಟಿಗರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
[ad_2]
Source link