[ad_1]
ನವದೆಹಲಿ: ಆಪರೇಷನ್ ಸಿಂದೂರ್(Operation Sindoor) ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಭುಗಿಲೆದ್ದಿದ್ದ ಯುದ್ಧದ ವಾತಾವರಣ ಕೊಂಚ ಮಟ್ಟಿಗೆ ತಿಳಿಗೊಂಡಿದ್ದು, ನಿನ್ನೆ ತಡರಾತ್ರಿಯಿಂದ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಿಂತಿದ್ದು, ಶಾಂತಿ ಸುವ್ಯವಸ್ಥೆ ಮರಳಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಮೂರು ಸೇನೆಗಳ ಮುಖ್ಯಸ್ಥರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಭಾರತದ DGMO ನೇತೃತ್ವದಲ್ಲೂ ಸಭೆ ನಡೆಯುತ್ತಿದೆ ಇಂದು ಸಂಜೆ ಭಾರತ-ಪಾಕ್ DGMOಗಳ ನಡುವೆ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕ ಭಾರತದ DGMO ನೇತೃತ್ವದಲ್ಲೂ ಸುದ್ದಿಗೋಷ್ಠಿ ನಡೆಸಿ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಿದೆ.
[ad_2]
Source link