[ad_1]
ಮುಂಬಯಿ: ಇಲ್ಲಿನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದ(Wankede stadium) ಒಂದು ಸ್ಟ್ಯಾಂಡ್ಗೆ ಶುಕ್ರವಾರ ದಿಗ್ಗಜ ಆಟಗಾರ ರೋಹಿತ್ ಶರ್ಮಾ(Rohith Sharma) ಅವರ ಹೆಸರಿಡಲಾಯಿತು. ಈ ಮೂಲಕ ಭಾರತೀಯ ಕ್ರಿಕೆಟ್ಗೆ ರೋಹಿತ್ ನೀಡಿದ ಅನನ್ಯ ಕೊಡುಗೆಗೆ ಗೌರವ ಸೂಚಿಸಲಾಯಿತು. ಇದೇ ವೇಳೆ ರೋಹಿತ್ಗೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್(Surya Kumar Yadav) ಅಭಿನಂದೆನೆ ಮತ್ತು ಗೌರವವನ್ನು ಸೂಚಿಸಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆ ಶುಕ್ರವಾರ ಮೂರು ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡಿತ್ತು. ಇನ್ನೆರಡು ಸ್ಟ್ಯಾಂಡ್ಗಳಿಗೆ ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರ ಹೆಸರುಗಳನ್ನು ಇಡಲಾಗಿದೆ.
ಸೂರ್ಯಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸೂರ್ಯಕುಮಾರ್, “ಫಿನಿಶರ್ ನಿಂದ ಓಪನರ್ ಆಗಿ, ನಂತರ ನಮ್ಮ ತಂಡದ ನಾಯಕನಾಗಿ ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆಟ ಅದೆಷ್ಟೋ ಯುವ ಕ್ರಿಕೆಟಿಗರಿಗೆ ಮಾದರಿ, ಅವರ ನಾಯಕತ್ವದ ಶೈಲಿ ಎಲ್ಲದರಲ್ಲಿಯೂ ಅವರು ಮೌಲ್ಯಯುತ ಬದಲಾವಣೆ ತಂದಿದ್ದಾರೆ. ಇದು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯ ಹೆಗ್ಗುರುತು” ಎಂದು ಸೂರ್ಯಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ.
Congratulations @ImRo45 on achieving incredible things on the cricket ground, from finisher to opener to our captain, you have been an inspiration and our pride, in every role. 🇮🇳
Very rarely comes a leader who leads from the front, and changes the game for better. You are that… pic.twitter.com/dVPCiaoU2z
— Surya Kumar Yadav (@surya_14kumar) May 16, 2025
ಕಾರ್ಯಕ್ರಮದಲ್ಲಿ ಮಾತನಾಡಿದ್ದ ರೋಹಿತ್, ನನ್ನ ಹೆಸರು ವಾಂಖೆಡೆ ಸ್ಟ್ಯಾಂಡ್ಗೆ ಇಡುವುದನ್ನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ನಾವು ಸಾಕಷ್ಟು ಮೈಲಿಗಲ್ಲುಗಳನ್ನು ಸಾಧಿಸಲು ಯತ್ನಿಸುತ್ತೇವೆ. ಆದರೆ ಇಂಥ ಕಾರ್ಯಕ್ರಮ ವಿಶೇಷವಾದುದು. ಈವರೆಗಿನ ವೃತ್ತಿ ಜೀವನದಲ್ಲಿ ತಮಗಾಗಿ ಮಾಡಿದ ತ್ಯಾಗಕ್ಕಾಗಿ ನನ್ನ ಕುಟುಂಬ ಸದಸ್ಯರು, ಪೋಷಕರು, ಸೋದರ, ಪತ್ನಿಗೆ ಕೃತಜ್ಞನಾಗಿದ್ದೇನೆ’ ಎಂದರು. ಮೇ 7ರಂದು ರೋಹಿತ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಇದನ್ನೂ ಓದಿ IPL 2025: ಐಪಿಎಲ್ ಉಳಿದ ಪಂದ್ಯ ಆಡದಂತೆ ವಿದೇಶಿ ಆಟಗಾರರಿಗೆ ಮನವಿ ಮಾಡಿದ ಆಸೀಸ್ ವೇಗಿ
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ, ಭಾರತ ಪರ 159 ಟಿ20 ಪಂದ್ಯಗಳು, 273 ಏಕದಿನ ಹಾಗೂ 67 ಟೆಸ್ಟ್ಗಳಲ್ಲಿ ಆಡಿದ್ದಾರೆ.
[ad_2]
Source link