[ad_1]
ಹೈದರಾಬಾದ್ : ದೇಶದ ಅತ್ಯಂತ ಗೌರವಾನ್ವಿತ ಮತ್ತು ಸ್ಫೂರ್ತಿದಾಯಕ ವ್ಯಕ್ತಿಯೊಬ್ಬರ ಬಯೋಪಿಕ್ ಅನ್ನು ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ ತಮಿಳಿನ ಸೂಪರ್ ಸ್ಟಾರ್ (Tamil superstar) ಧನುಷ್ (Dhanush). ದೇಶದ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ (Dr. APJ Abdul Kalam) ಅವರ ಜೀವನಯಾನವನ್ನು ಶೀಘ್ರದಲ್ಲೇ ಧನುಷ್ ತೆರೆಯ ಮೇಲೆ ತರಲಿದ್ದಾರೆ. ಕಾನ್ಸ್ ಚಲನಚಿತ್ರೋತ್ಸವದಲ್ಲಿ ಘೋಷಣೆಯಾದ ‘ಕಲಾಮ್: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ (Kalam, The Missile Man of India) ಚಿತ್ರ ಕುತೂಹಲ ಕೆರಳಿಸಿದೆ.
ʼತನ್ಹಾಜಿ: ದಿ ಅನ್ಸಂಗ್ ವಾರಿಯರ್ʼ ಮತ್ತು ʼಆದಿಪುರುಷʼ ಚಿತ್ರಗಳ ನಿರ್ದೇಶಕ ಓಂ ರಾವತ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರವು ರಾಮೇಶ್ವರಂನಿಂದ ರಾಷ್ಟ್ರಪತಿ ಭವನಕ್ಕೆ ಕಲಾಂ ಅವರ ಐತಿಹಾಸಿಕ ಪ್ರಯಾಣವನ್ನು ವಿವರಿಸಲಿದೆ ಎನ್ನುವ ಭರವಸೆಯನ್ನು ಚಿತ್ರತಂಡ ನೀಡಿದೆ.
ಈ ಚಿತ್ರದ ಕುರಿತಾದ ಪೋಸ್ಟರ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಧನುಷ್, ಮಾಜಿ ರಾಷ್ಟ್ರಪತಿ ಮತ್ತು ವಿಜ್ಞಾನಿ ಕಲಾಂ ಅವರ ಬಗ್ಗೆ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼʼನಮ್ಮವರೇ ಆಗಿರುವ ಡಾ. ಎಪಿಜೆ ಅಬ್ದುಲ್ ಕಲಾಂ ಸರ್ ಅವರಂತಹ ಸ್ಪೂರ್ತಿದಾಯಕ ಮತ್ತು ಉದಾತ್ತ ನಾಯಕನ ಜೀವನದ ಚಿತ್ರ ನನ್ನ ಪಾಲಿಗೆ ಬಂದಿರುವುದರಿಂದ ನಾನು ನಿಜವಾಗಿಯೂ ಧನ್ಯʼʼ ಎಂದು ಬರೆದಿದ್ದಾರೆ. ಈ ಪೋಸ್ಟರ್ನಲ್ಲಿ ಧನುಷ್ ಅವರನ್ನು ಕಲಾಂ ಪಾತ್ರದಲ್ಲಿ ತೋರಿಸಲಾಗಿದೆ. ಇದು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕಾರ್ಯಕ್ರಮಗಳಿಗೆ ಕಲಾಂ ಅವರ ಕೊಡುಗೆಯನ್ನು ಪ್ರತಿಬಿಂಬಿಸಲಿದೆ.
ʼʼರಾಮೇಶ್ವರಂನಿಂದ ರಾಷ್ಟ್ರಪತಿ ಭವನಕ್ಕೆ ಚಿತ್ರಕಥೆಯ ಪ್ರಯಾಣ ಪ್ರಾರಂಭವಾಗುತ್ತದೆ. ಭಾರತದ ಮಿಸೈಲ್ ಮ್ಯಾನ್ ಬೆಳ್ಳಿ ಪರದೆಗೆ ಬರುತ್ತಿದೆ. ದೊಡ್ಡ ಕನಸು ಕಾಣಿರಿ. ಎತ್ತರಕ್ಕೆ ಏರಿರಿ ಎನ್ನುವ ಸಂದೇಶದೊಂದಿಗೆʼʼ ಓಂ ರಾವುತ್ ತಮ್ಮ ಅಧಿಕೃತ ಎಕ್ಸ್ ಪುಟದಲ್ಲಿ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಮೂಲಕ ಕಲಾಂ ಅವರಿಗೆ ಗೌರವವನ್ನು ಮಾತ್ರವಲ್ಲದೆ ಅವರ ಕಥೆಯನ್ನು ಸಿನಿಮಾದ ಮೂಲಕ ಪ್ಯಾನ್-ಇಂಡಿಯಾ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಈ ಚಿತ್ರವನ್ನು ಓಂ ರಾವುತ್ ಅವರು ಟಿ-ಸೀರೀಸ್ನ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಅಭಿಷೇಕ್ ಅಗರ್ವಾಲ್ ಆರ್ಟ್ಸ್ನ ಅಭಿಷೇಕ್ ಅಗರ್ವಾಲ್ ಮತ್ತು ಅನಿಲ್ ಸುಂಕಾರ ಅವರೊಂದಿಗೆ ನಿರ್ಮಿಸಲಿದ್ದಾರೆ. ಚಿತ್ರಕಥೆಯನ್ನು ಸೈವಿನ್ ಕ್ವಾಡ್ರಾಸ್ ಬರೆದಿದ್ದಾರೆ. ಈ ಹಿಂದೆ ಅವರು ‘ನೀರ್ಜಾ’, ‘ಮೈದಾನ್’ ಮತ್ತು ‘ಪರಮಾನು: ದಿ ಸ್ಟೋರಿ ಆಫ್ ಪೋಖ್ರಾನ್’ ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದರು.
[ad_2]
Source link