[ad_1]
ಬೆಂಗಳೂರು: ಕನ್ನಡ ಮಾತ್ರವಲ್ಲದೇ ತಮಿಳು ಹಾಗು ಹಿಂದಿ ಚಿತ್ರರಂಗದಲ್ಲಿ ಬೋಲ್ಡ್ ನಟನೆ ಜತೆಗೆ ಗ್ಲ್ಯಾಮರ್ನಿಂದ ಬೇಡಿಕೆಯನ್ನು ಹೊಂದಿರುವ ನಟಿ ರಾಗಿಣಿ ದ್ವಿವೇದಿ (Ragini Dwivedi). ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಛಾಪು ಮೂಡಿಸಿರುವ ʼವೀರ ಮದಕರಿʼ ಸುಂದರಿ ಕೈಯಲ್ಲಿ ಈಗಲೂ ಹಲವು ಸಿನಿಮಾಗಳಿವೆ. ಸದ್ಯ ಸಿನಿಮಾ ಜತೆ ಜತೆಗೆ ಆಲ್ಬಂ ವಿಡಿಯೊಗಳನ್ನು ಮಾಡುತ್ತಿರುವ ರಾಗಿಣಿ ದ್ವಿವೇದಿ ಶನಿವಾರ (ಮೇ 24) ಹುಟ್ಟುಹಬ್ಬದ (Birthday) ಸಂಭ್ರಮ. 35ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬೆಡಗಿಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಸ್ಯಾಂಡಲ್ವುಡ್ ಸುಂದರಿ ಈ ವರ್ಷದ ಹುಟ್ಟುಹಬ್ಬವನ್ನು ಕೊಂಚ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.
ನಟಿಮಣಿಯರು ಸಹಜವಾಗಿ ತಮ್ಮ ಬರ್ತ್ ಡೇಯನ್ನು ಕುಟುಂಬದವರು ಹಾಗೂ ಸ್ನೇಹಿತರ ಜತೆ ಸೇರಿ ಪಾರ್ಟಿ ಮಾಡುವ ಮೂಲಕ ಜೋರಾಗಿಯೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ದಶಕದ ಸಿನಿ ಜರ್ನಿಯಲ್ಲಿ ಏಳು ಬೀಳುಗಳನ್ನು ಕಂಡ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೆಲ ಸಾಮಾಜಿಕ ಕೆಲಸಗಳ ಮೂಲಕ ಜನ್ಮದಿನ ಆಚರಿಸಿಕೊಂಡರು. ಪೌರ ಕಾರ್ಮಿಕರೊಂದಿಗೆ ಹುಟ್ಟುಹಬ್ಬ ಆಚರಿಸಿ ಅವರನ್ನ ಸತ್ಕರಿಸಿ, ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದು ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇನ್ನು ನಾನಾ ಸಿನೆಮಾಗಳಲ್ಲಿ ಬ್ಯುಸಿ ಆಗಿರುವ ರಾಗಿಣಿ ದ್ವಿವೇದಿ ಅವರ ಮುಂದಿನ ಚಿತ್ರ ‘ಜಾವಾ’ದಲ್ಲಿ ಡೇರಿಂಗ್ ಹಾಗೂ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ರಾಜ್ ವರ್ಧನ್ ಜತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ.
ಈ ಸುದ್ದಿಯನ್ನು ಓದಿ: Coolie Movie: ಅಬ್ಬಬ್ಬಾ! ‘ಕೂಲಿ’ ಸೆಟ್ಗೆ ಮಾಸ್ ಆಗಿ ಎಂಟ್ರಿ ಕೊಟ್ಟ ತಲೈವಾ; ಇಲ್ಲಿದೆ ವಿಡಿಯೊ
ದೇವಾ ಚಕ್ರವರ್ತಿ ನಿರ್ದೇಶನದ ʼಜಾವಾʼ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದು, ಉತ್ತಮ ಕಥಾಹಂದರದೊಂದಿಗೆ ಮಾಸ್ ಪ್ರಿಯರನ್ನು ಸೆಳೆಯುವ ನಿರೀಕ್ಷೆಯಿದೆ. ಇನ್ನು ದುರಹಂಕಾರಕ್ಕೆ ಬ್ರ್ಯಾಂಡ್ ಅಂಬಾಸಿಡರ್ ‘R’ queen ಎಂಬ ಕ್ಯಾಪ್ಷನ್ ನೀಡಿ ರಾಗಿಣಿಯ ʼಜಾವಾʼ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಆ ಮೂಲಕʼಜಾವಾʼ ಚಿತ್ರದ ನಾಯಕ & ನಿರ್ಮಾಪಕ ರಾಜವರ್ಧನ್ ನಾಯಕಿ ರಾಗಿಣಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ.
`ವೀರ ಮದಕರಿ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ರಾಗಿಣಿ ಬಳಿಕ `ಕೆಂಪೇಗೌಡ’, `ವಿಕ್ಟರಿ’, `ಕಳ್ಳ ಮಳ್ಳ ಸುಳ್ಳ’, `ಶಿವಂ’, ಇತ್ತೀಚೆಗೆ ಬಿಡುಗಡೆಗೊಂಡ `ಕಿಚ್ಚು’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
[ad_2]
Source link