[ad_1]
ಮುಲ್ಲಾನ್ಪುರ(ಚಂಡೀಗಢ): ಇಂದು ನಡೆಯುವ ಐಪಿಎಲ್ 18ನೇ ಆವೃತ್ತಿಯ ಕ್ವಾಲಿಫೈಯರ್-1ರ(IPL 2025 Qualifier 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ಸೆಣಸಾಡಲಿವೆ. ಗೆಲ್ಲುವ ತಂಡ ನೇರವಾಗಿ ಫೈನಲ್ಗೇರಲಿದ್ದು, ಸೋಲುವ ತಂಡಕ್ಕೆ ಫೈನಲ್ಗೇರಲು ಇನ್ನೊಂದು ಅವಕಾಶ ಇರಲಿದೆ. ಈ ಪಂದ್ಯದ ಹವಾಮಾನ ವರದಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಅಕ್ಯೂವೆದರ್ ವರದಿ ಪ್ರಕಾರ, ದಿನವಿಡೀ ಮಳೆಯಾಗುವ ನಿರೀಕ್ಷೆಯಿಲ್ಲ. ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆರ್ದ್ರತೆಯ ಮಟ್ಟವು ಗರಿಷ್ಠ 30 ರಿಂದ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ಗಾಳಿಯ ವೇಗ ಗಂಟೆಗೆ 20 ಕಿ.ಮೀ.ವರೆಗೆ ತಲುಪುವ ನಿರೀಕ್ಷೆಯಿದೆ.
ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಈ ಹಿಂದೆ ಫೈನಲ್ಗೇರಿತ್ತು. ಆದರೆ ಈವರೆಗೂ ಟ್ರೋಫಿ ಗೆದ್ದಿಲ್ಲ. ಆರ್ಸಿಬಿ 2009, 2011 ಹಾಗೂ 2016ರಲ್ಲಿ ಫೈನಲ್ ಗೇರಿತ್ತು.
ಇದನ್ನೂ ಓದಿ IPL 2025: ಗೆಲುವಿನೊಂದಿಗೆ ನೂತನ ದಾಖಲೆ ಬರೆದ ಆರ್ಸಿಬಿ
ಕ್ವಾಲಿಫೈಯರ್ ಪಂದ್ಯಕ್ಕೆ ಮೀಸಲು ದಿನ ಇರದ ಕಾರಣ ಗುರುವಾರ ನಡೆಯುವ ಆರ್ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ ಪಂಜಾಬ್ ಕಿಂಗ್ಸ್ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಕನಿಷ್ಠ 5 ಓವರ್ಗಳ ಪಂದ್ಯ ಅಥವಾ ಸೂಪರ್ ಓವರ್ ಕೂಡ ನಡೆಯಲಿದ್ದರೆ ಆಗ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದ ತಂಡ ಮುನ್ನಡೆಯಲಿದೆ. ಆರ್ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಕಾರಣ. ಪಂದ್ಯ ರದ್ದಾದರೆ ಮುಂಬೈ ಮತ್ತು ಗುಜರಾತ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರನ್ನು ದ್ವಿತೀಯ ಕ್ವಾಲಿಫೈಯರ್ನಲ್ಲಿ ಎದುರಿಸಲಿದೆ.
[ad_2]
Source link