[ad_1]
ಮುಲ್ಲಾನ್ಪುರ್ (ಚಂಡೀಗಢ): ಗುರುವಾರ ಚಂಡೀಗಡದಲ್ಲಿ ನಡೆದ ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್(RCB vs PBKS) ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ಸಾಧಿಸಿರುವ ಆರ್ಸಿಬಿ, ಫೈನಲ್ಗೆ ಪ್ರವೇಶಿಸಿದೆ. ಈ ಮೂಲಕ 2009, 2011 ಮತ್ತು 2016 ರ ನಂತರ ಆರ್ಸಿಬಿ ನಾಲ್ಕನೇ ಬಾರಿ ಫೈನಲ್ಗೆ ತಲುಪಿದೆ. 9 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವುದರಿಂದ ಆರ್ಸಿಬಿ ಅಭಿಮಾನಿಗಳು ಭಾರಿ ಉತ್ಸುಕರಾಗಿದ್ದು ಕಪ್ ಗೆಲ್ಲಲೇ ಬೇಕು ಎಂದು ಎದುರು ನೋಡುತ್ತಿದ್ದಾರೆ. ಪಂದ್ಯದ ಗೆಲುವಿನ ಬಳಿಕ ವಿರಾಟ್ ಕೊಹ್ಲಿ(Virat Kohli) ಅವರು ಪತ್ನಿ ಅನುಷ್ಕಾ ಶರ್ಮಾ(Anushka Sharma)ಗೆ ಮಾಡಿದ ಸನ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.
‘ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ’ ಎಂದು ವಿರಾಟ್ ಅವರು ಗ್ಯಾಲರಿಯಲ್ಲಿದ್ದ ಪತ್ನಿಗೆ ಸನ್ನೆ ಮಾಡಿದ್ದಾರೆ. ಪ್ರಸ್ತುತ ಈ ವಿಡಿಯೊವನ್ನು ಐಪಿಎಲ್ ಹಾಗೂ ಆರ್ಸಿಬಿಯ ಅಧಿಕೃತ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಕಳೆದ 18 ವರ್ಷಗಳಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ ಈ ಸಲ ಟ್ರೋಫಿಯ ಸನಿಹದಲ್ಲಿದ್ದಾರೆ. ಅಲ್ಲದೆ ಈ ಬಾರಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.
ಚಂಡೀಗಢದ ಮುಲ್ಲಾನ್ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ಶೋಚನೀಯ ಬ್ಯಾಟಿಂಗ್ ಪ್ರದರ್ಶನದ ಮೂಲಕ 14.1 ಓವರ್ನಲ್ಲಿ 101 ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆರ್ಸಿಬಿ 10 ಓವರಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಆರ್ಸಿಬಿ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಸುಯಶ್ ಶರ್ಮಾ 3 ಓವರ್ನಲ್ಲಿ 17 ರನ್ಗೆ 3 ವಿಕೆಟ್ ಕಿತ್ತರೆ, ಹೇಜಲ್ವುಡ್ 3.1 ಓವರ್ಗಳಲ್ಲಿ 21ಕ್ಕೆ 3 ವಿಕೆಟ್ ಪಡೆದರು. ಯಶ್ ದಯಾಳ್ 2, ಭುವನೇಶ್ವರ್ ಹಾಗೂ ಶೆಫರ್ಡ್ ತಲಾ 1 ವಿಕೆಟ್ ಕಿತ್ತರು.
[ad_2]
Source link