[ad_1]
ಅಹಮದಾಬಾದ್: ಪಂಜಾಬ್ ಕಿಂಗ್ಸ್ (PBKS) ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ರೀತಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ್ದಾರೆ ಎಂದು ಆರ್ಸಿಬಿ ಫ್ಯಾನ್ಸ್ ದೂರಿದ್ದಾರೆ. ಮತ್ತೊಂದು ತುದಿಯಲ್ಲಿ ಯಾವುದೇ ಬ್ಯಾಟ್ಸ್ಮನ್ ದೀರ್ಘಾವಧಿ ಕ್ರೀಸ್ನಲ್ಲಿ ನಿಂತಿರಲಿಲ್ಲ. ಈ ಕಾರಣದಿಂದ ವಿರಾಟ್ ಕೊಹ್ಲಿ ನಿಧಾನಗತಿಯ ಆಟಕ್ಕೆ ಮೊರೆ ಹೊಗಿದ್ದರು. ಆದರೆ, ಅರ್ಧಶತಕದಂಚಿನಲ್ಲಿ ವಿರಾಟ್ ಕೊಹ್ಲಿ, ವೇಗಿ ಅಝಮತ್ವುಲ್ಲಾ ಒಮರ್ಜಾಯ್ಗೆ ವಿಕೆಟ್ ಒಪ್ಪಿಸಿದರು.
ಮಂಗಳವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಫಿಲ್ ಸಾಲ್ಟ್ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಯಾಂಕ್ ಅಗರ್ವಾಲ್ ಹಾಗೂ ರಜತ್ ಪಾಟಿದಾರ್ ಉತ್ತಮ ಆರಂಭದ ಹೊರತಾಗಿಯೂ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.
RCB vs PBKS: ಶಿಖರ್ ಧವನ್ರ ಐಪಿಎಲ್ ಬೌಂಡರಿ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ್ದ ವಿರಾಟ್ ಕೊಹ್ಲಿ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಲಿಲ್ಲ. ಏಕೆಂದರೆ ಮತ್ತೊಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಬೀಳುತ್ತಿದ್ದವು. ಹಾಗಾಗಿ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಮಾಡಿದರು. ಹಾಗಾಗಿ ಸ್ಪೋಟಕವಾಗಿ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ. ಅವರು 35 ಎಸೆತಗಳಲ್ಲಿ 43 ರನ್ಗಳನ್ನು ಗಳಿಸಿದರು. ನಂತರ ಅಝಮತ್ವುಲ್ಲಾ ಒಮರ್ಜಾಯ್ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ, ಚೆಂಡು ಬ್ಯಾಟ್ಗೆ ಸರಿಯಾಗಿ ಸಿಗದ ಕಾರಣ ವೇಗಿ ಒಮರ್ಜಾಯ್ ಕ್ಯಾಚ್ ಕೊಟ್ಟರು.
Parthiv Patel in Commentary: 🗣️
” Rajat Patidar scored 50 in 18 balls on the same pitch where Virat Kohli is playing. You can’t say this is a slow track now. Unbelievable batting.”#RCBvsSRH pic.twitter.com/TF3uMWsnRL
— ANSHUMAN🚩 (@AvengerReturns) April 25, 2024
ವಿರಾಟ್ ಕೊಹ್ಲಿಯನ್ನು ಟೀಕಿಸಿದ ಫ್ಯಾನ್ಸ್
ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ ಹಾಗೂ ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆ ಎಂದು ದೂರಿದ್ದಾರೆ. ಕೊಹ್ಲಿ ನಿಧಾನಗತಿಯಿಂದ ಬ್ಯಾಟ್ ಮಾಡಿದ್ದ ಕಾರಣ ಮತ್ತೊಂದು ತುದಿಯಲ್ಲಿ ರಜತ್ ಪಾಟಿದಾರ್ ಮೇಲೆ ಒತ್ತಡ ಹೆಚ್ಚಾಯಿತು. ಈ ಕಾರಣದಿಂದಲೇ ಅವರು ವಿಕೆಟ್ ಒಪ್ಪಿಸಿದ್ದಾರೆಂದು ಅಭಿಮಾನಿಯೊಬ್ಬರು ದೂರಿದ್ದಾರೆ.
Srikanth in comments: 🗣️
” People thought pitch is slow when Virat Kohli was batting, but KKR batsmen has shown that it was an easy wicket and RCB scored less runs.”#RCBvsKKR pic.twitter.com/SBtP8OidEY
— ANSHUMAN🚩 (@AvengerReturns) March 29, 2024
190 ರನ್ಗಳನ್ನು ಕಲೆ ಹಾಕಿದ ಆರ್ಸಿಬಿ
ವಿರಾಟ್ ಕೊಹ್ಲಿ 43 ರನ್ ಗಳಿಸಿ ಆರ್ಸಿಬಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಆದರು. ಆದರೆ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಉತ್ತಮ ಆರಂಭ ಪಡೆದಿದ್ದರು. ಆದರೂ ಅವರು ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಆರ್ಸಿಬಿ ತಂಡ, ತನ್ನ ಪಾಲಿನ 20 ಓವರ್ಗಳಿಗೆ 9 ವಿಕೆಟ್ಗಳ ನಷ್ಟಕ್ಕೆ 190 ರನ್ಗಳನ್ನು ಕಲೆ ಹಾಕಿತು.
[ad_2]
Source link