
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಖ್ಯಾತ ತೆಲುಗಿನ ಹಿನ್ನೆಲೆ ಗಾಯಕಿ ಮಂಗ್ಲಿ ಬರ್ತ್ಡೇ ಪಾರ್ಟಿ ಮೇಲೆ ಪೊಲೀಸರು ರೆೇಡ್ ಮಾಡಿದ್ದಾರೆ. ಹೈದರಾಬಾದ್ ಹೊರವಲಯದ ರಂಗಾರೆಡ್ಡಿ ಜಿಲ್ಲೆಯ ತ್ರಿಪುರ ರೆಸಾರ್ಟ್ನಲ್ಲಿ ನಿನ್ನೆ ಮಂಗ್ಲಿ ಅವರ ಬರ್ತ್ಡೇ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ರೆಸಾರ್ಟ್ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ.

ಮಂಗ್ಲಿ ಪಾರ್ಟಿಯಲ್ಲಿ ಒಟ್ಟು 48 ಮಂದಿ ಭಾಗಿಯಾಗಿದ್ದು, ಇವರಲ್ಲಿ ಎಲ್ಲರ ರಕ್ತ ಪರೀಕ್ಷೆ ಮಾಡಲಾಗಿದೆ. ಆದ್ರಲ್ಲಿ 9 ಮಂದಿಗೆ ಡ್ರಗ್ಸ್ ಸೇವನೆಯ ಪಾಸಿಟಿವ್ ರಿಪೋರ್ಟ್ ಬಂದಿದೆ. ಮಂಗ್ಲಿ ಬರ್ತ್ ಡೇಯಲ್ಲಿ ವಿದೇಶಿ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಎನ್ಡಿಪಿಎಸ್ ಆ್ಯಕ್ಟ್, ಶಬ್ದ ಮಾಲಿನ್ಯ ಕಾಯಿದೆಯಡಿ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಬರ್ತ್ಡೇ ಪಾರ್ಟಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಕಿ ಮಂಗ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳದ ವಿಡಿಯೋ ಮಾಡುತ್ತಿದ್ದ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ ಗಾಯಕಿ ಮಂಗ್ಲಿ, ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಗಾಯಕಿ ಮಂಗ್ಲಿ, ಟಿವಿ ನಿರೂಪಕಿಯಾಗಿ, ಜನಪದ ಹಾಡುಗಳ ಗಾಯಕಿಯಾಗಿ, ಯೂಟ್ಯೂಬ್ ಗಾಯಕಿಯಾಗಿ, ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ನಿರೂಪಕಿಯಾಗಿ ವೃತ್ತಿ ಆರಂಭಿಸಿ ಈಗ ದಕ್ಷಿಣ ಭಾರತದ ಬಲು ಜನಪ್ರಿಯ ಹಾಡುಗಾರ್ತಿಯರಲ್ಲಿ ಒಬ್ಬರಾಗಿದ್ದಾರೆಮಂಗ್ಲಿಗೆ ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ. ಕರ್ನಾಟಕದಲ್ಲಿಯೂ ಅವರು ಕೆಲವು ಸಿನಿಮಾಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಲೈವ್ ಶೋಗಳನ್ನು ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಳ್ಳಾರಿ, ರಾಯಚೂರು ಭಾಗಗಳಲ್ಲಿ ಅವರನ್ನು ಚುನಾವಣೆ ಪ್ರಚಾರಕ್ಕೆ ಸಹ ಕರೆಸಲಾಗಿತ್ತು. ಈಗ ಮಂಗ್ಲಿ, ಮಾದಕ ವಸ್ತು ಪ್ರಕರಣದ ಆರೋಪಿಯಾಗಿದ್ದಾರೆ.