
ಧಾರವಾಡ: ರೈತ ಕೃಷಿ ಕಾರ್ಮಿಕರ ಪರಿಸ್ಥಿತಿ ಅತ್ಯಂತ ಗಂಭೀರವಿದೆ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕೇರಿ ದಿನದೂಡುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನರೇಗಾ ಕೂಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಆಸರೆಯಾಗಿದೆ. ಆದರೆ ಬೇಸಿಗೆ ಕಳೆಯುತ್ತಾ ಬಂದರೂ ಈ ವರ್ಷ ಹೊನ್ನಾಪುರ ಗ್ರಾಮ ಪಂಚಾಯಿತಿಯ ಕಂಬಾರ್ ಗಣವಿ ಗ್ರಾಮಸ್ಥರಿಗೆ ಇದುವರೆಗೂ ಒಂದು ದಿನವೂ ಕೆಲಸ ನೀಡಿಲ್ಲ.ಇನ್ನು ಸರ್ಕಾರ ದುಡಿದ ಪಗಾರವು ಬಿಡುಗಡೆ ಮಾಡಿಲ್ಲ ಇಂತಹ ಪರಿಸ್ಥಿತಿಯಲ್ಲಿ ಜನತೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಹೊನ್ನಾಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕಂಬಾರಗಣವಿ ಗ್ರಾಮಸ್ಥರಿಗೆ ಕೂಡಲೇ ಕೆಲಸ ನೀಡಬೇಕೆಂದು
AIKKMS ಕಂಬಾರ್ ಗಣವಿ ಗ್ರಾಮ ಘಟಕ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹೊನ್ನಾಪುರ ಬಸ್ ನಿಲ್ದಾಣದಿಂದ ಗ್ರಾಮ ಪಂಚಾಯಿತಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಕಂಬಾರ ಗಣವಿ ಗ್ರಾಮಸ್ಥರು ನರೇಗಾ ಕೂಲಿ ಬೇಕೇ ಬೇಕು,ಕೂಡಲೇ ನರೇಗಾ ಕೆಲಸ ಕೊಡಲೇಬೇಕು, ಕೆಲಸ ಕೊಡದ ಗ್ರಾಮ ಪಂಚಾಯಿತಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.
