[ad_1]
ಲಖನೌ: ಈ ಹಿಂದೆ ಹಲವು ಬಾರಿ ದಂಪತಿ ಬೈಕ್ನ ಇಂಧನ ಟ್ಯಾಂಕ್ ಮೇಲೆ ಕುಳಿತು ಸ್ಟಂಟ್ (Bike Stunt) ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದೀಗ ನೋಯ್ಡಾ-ಗ್ರೇಟರ್ ನೋಯ್ಡಾದಲ್ಲಿ ಇಂತಹದೊಂದು ಘಟನೆ ಮತ್ತೆ ನಡೆದಿದೆ. ಇಲ್ಲಿನ ಎಕ್ಸ್ಪ್ರೆಸ್ವೇಯಲ್ಲಿ ಚಲಿಸುವ ಬೈಕಿನಲ್ಲಿ ಗಂಡ ಮತ್ತು ಹೆಂಡತಿ ಸ್ಟಂಟ್ ಮಾಡಿದ ವಿಡಿಯೊವೊಂದು ವೈರಲ್ (Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಬಗ್ಗೆ ನಗರ ಪೊಲೀಸರಿಗೆ ವರದಿ ಮಾಡಲಾಗಿದ್ದು, ದಂಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಹಾಗಾಗಿ ನೋಯ್ಡಾ (Noida) ಸಂಚಾರ ಪೊಲೀಸರು ದಂಪತಿಗೆ ಭಾರಿ ದಂಡ ವಿಧಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಜನನಿಬಿಡ ಎಕ್ಸ್ಪ್ರೆಸ್ವೇಯಲ್ಲಿ ಬೈಕ್ನಲ್ಲಿ ಸ್ಟಂಟ್ ಮಾಡುತ್ತಿರುವುದು ಸೆರೆಯಾಗಿದೆ. ಪತ್ನಿ ಇಂಧನ ಟ್ಯಾಂಕ್ನಲ್ಲಿ ಕುಳಿತು ತನ್ನ ಕಾಲುಗಳನ್ನು ಅವನ ಸುತ್ತಲೂ ಸುತ್ತಿಕೊಂಡಿದ್ದಾಳೆ. ಇಬ್ಬರು ಹೆಲ್ಮೆಟ್ ಕೂಡ ಧರಿಸಿಲ್ಲ.
ವಿಡಿಯೊ ಇಲ್ಲಿದೆ ನೋಡಿ…
नोएडा: चलती बाइक पर इश्क फरमाते कपल का वीडियो हुआ वायरल, ट्रैफिक पुलिस ने काटा ₹53,500 का चालान। pic.twitter.com/9qSjXaeDcP
— Greater Noida West (@GreaterNoidaW) June 16, 2025
ವರದಿ ಪ್ರಕಾರ, ನೋಯ್ಡಾ ಎಕ್ಸ್ಪ್ರೆಸ್ವೇಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಕೃತ್ಯ ರೆಕಾರ್ಡ್ ಆಗಿದೆ. ದಾರಿ ಹೋಕರೊಬ್ಬರು ಈ ದೃಶ್ಯವನ್ನು ವಿಡಿಯೊ ಮಾಡಿ ಸಂಚಾರ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಹಾಗಾಗಿ ನೋಯ್ಡಾ ಸಂಚಾರ ಪೊಲೀಸರು, ಮೋಟಾರು ವಾಹನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ 53,500 ರೂ.ಗಳ ಭಾರಿ ದಂಡ ವಿಧಿಸಿದ್ದಾರೆ.
ಈ ಹಿಂದೆ ಇದೇ ರೀತಿಯ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸರ್ಜಾಪುರದ ಮುಖ್ಯ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಒಬ್ಬ ವ್ಯಕ್ತಿ ಬೈಕ್ ಚಲಾಯಿಸಿದ್ದಲ್ಲದೆ ತನ್ನ ಬೈಕ್ನ ಇಂಧನ ಟ್ಯಾಂಕ್ ಮೇಲೆ ಮಹಿಳೆಯೊಬ್ಬಳನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡುತ್ತಾ ಸಾಗಿದ್ದನು. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಇಂತಹ ಬೇಜವಾಬ್ದಾರಿ ವರ್ತನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ; ರ್ಯಾಶ್ ಡ್ರೈವಿಂಗ್ ಪ್ರಶ್ನಿಸಿದ ಯುವತಿಗೆ ಹೊಡೆದ ರ್ಯಾಪಿಡೋ ಬೈಕ್ ಚಾಲಕ
ವಿಡಿಯೊ ವೈರಲ್ ಆದ ನಂತರ ಬೆಂಗಳೂರು ಜಿಲ್ಲಾ ಪೊಲೀಸರು ವ್ಯಕ್ತಿ ಮತ್ತು ಆತನ ಸಂಗಾತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೊ 7,000ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿತ್ತು. ಪೊಲೀಸರ ತ್ವರಿತ ಕ್ರಮಕ್ಕಾಗಿ ಹಲವರಿಂದ ಹೊಗಳಿಕೆ ವ್ಯಕ್ತವಾಗಿತ್ತು.
[ad_2]
Source link