[ad_1]
ಲಂಡನ್: ಮುಂದಿನ ವರ್ಷ(2026) ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ(2026 Women’s T20 WC) ವೇಳಾಪಟ್ಟಿ ಪ್ರಕಟಗೊಂಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಆತಿಥೇಯ ಇಂಗ್ಲೆಂಡ್ ತಂಡವು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. 33 ಪಂದ್ಯಗಳ ಈ ಚುಟುಕು ಸಮರ ಜೂನ್ 12 ರಂದು ಎಡ್ಜ್ಬಾಸ್ಟನ್ನಲ್ಲಿ ಆರಂಭವಾಗಲಿದ್ದು, ಫೈನಲ್ ಜುಲೈ 5 ರಂದು ಲಾರ್ಡ್ಸ್ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಜೂನ್ 14 ರಂದು ಎಡ್ಜ್ಬಾಸ್ಟನ್ನಲ್ಲಿ ಸೆಣಸಾಟ ನಡೆಸಲಿವೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ 12 ತಂಡಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಸೆಮಿಫೈನಲ್ ಪಂದ್ಯ ಕ್ರಮವಾಗಿ ಜೂನ್ 30 ಮತ್ತು ಜುಲೈ 2 ರಂದು ಓವಲ್ನಲ್ಲಿ ನಡೆಯಲಿವೆ. ಕೆಲ ಪಂದ್ಯಗಳು ಹಗಲು-ರಾತ್ರಿಯ ಪಂದ್ಯಗಳಾಗಿವೆ.
ಗುಂಪು 1 ರಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ ಮತ್ತು ಎರಡು ಅರ್ಹತಾ ಸುತ್ತಿನ ತಂಡಗಳು ಸೇರಿವೆ. ಗುಂಪು 2 ರಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಎರಡು ಅರ್ಹತಾ ಸುತ್ತಿನ ತಂಡಗಳು ಸೇರಿವೆ. ಲಾರ್ಡ್ಸ್, ಓವಲ್ ಮತ್ತು ಎಡ್ಜ್ಬಾಸ್ಟನ್ ಹೊರತುಪಡಿಸಿ, ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ, ಬ್ರಿಸ್ಟಲ್ ಕೌಂಟಿ ಮೈದಾನ ಮತ್ತು ಹ್ಯಾಂಪ್ಶೈರ್ ಬೌಲ್ ಕೂಡ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಿವೆ. ಸ್ಥಳೀಯ ಸಮಯದ ಪ್ರಕಾರ, ಪಂದ್ಯಗಳು ಬೆಳಿಗ್ಗೆ 10:30, ಮಧ್ಯಾಹ್ನ 2:30 ಮತ್ತು ಸಂಜೆ 6:30 ಕ್ಕೆ ಪ್ರಾರಂಭವಾಗಲಿವೆ.
ಇದನ್ನೂ ಓದಿ Sophie Devine: ಮಹಿಳಾ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ಗೆ ಸೋಫಿ ಡಿವೈನ್ ನಿವೃತ್ತಿ
ವೇಳಾಪಟ್ಟಿ
ಜೂನ್ 12: ಇಂಗ್ಲೆಂಡ್ vs ಶ್ರೀಲಂಕಾ, ಎಡ್ಜ್ಬಾಸ್ಟನ್
ಜೂನ್ 13: ಕ್ವಾಲಿಫೈಯರ್ vs ಕ್ವಾಲಿಫೈಯರ್, ಓಲ್ಡ್ ಟ್ರಾಫರ್ಡ್
ಜೂನ್ 13: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫರ್ಡ್
ಜೂನ್ 13: ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್, ಹ್ಯಾಂಪ್ಶೈರ್
ಜೂನ್ 14: ಕ್ವಾಲಿಫೈಯರ್ vs ಕ್ವಾಲಿಫೈಯರ್, ಎಡ್ಜ್ಬಾಸ್ಟನ್
ಜೂನ್ 14: ಭಾರತ vs ಪಾಕಿಸ್ತಾನ, ಎಡ್ಜ್ಬಾಸ್ಟನ್
ಜೂನ್ 16: ನ್ಯೂಜಿಲೆಂಡ್ vs ಶ್ರೀಲಂಕಾ, ಹ್ಯಾಂಪ್ಶೈರ್
ಜೂನ್ 16: ಇಂಗ್ಲೆಂಡ್ vs ಕ್ವಾಲಿಫೈಯರ್, ಹ್ಯಾಂಪ್ಶೈರ್
ಜೂನ್ 17: ಆಸ್ಟ್ರೇಲಿಯಾ vs ಕ್ವಾಲಿಫೈಯರ್, ಹೆಡಿಂಗ್ಲಿ
ಜೂನ್ 17: ಭಾರತ vs ಕ್ವಾಲಿಫೈಯರ್, ಹೆಡಿಂಗ್ಲಿ
ಜೂನ್ 17: ದಕ್ಷಿಣ ಆಫ್ರಿಕಾ vs ಪಾಕಿಸ್ತಾನ, ಎಡ್ಜ್ಬಾಸ್ಟನ್
ಜೂನ್ 18: ವೆಸ್ಟ್ ಇಂಡೀಸ್ vs ಕ್ವಾಲಿಫೈಯರ್, ಹೆಡಿಂಗ್ಲಿ
ಜೂನ್ 19: ನ್ಯೂಜಿಲೆಂಡ್ vs ಕ್ವಾಲಿಫೈಯರ್, ಹ್ಯಾಂಪ್ಶೈರ್
ಜೂನ್ 20: ಆಸ್ಟ್ರೇಲಿಯಾ vs ಕ್ವಾಲಿಫೈಯರ್, ಹ್ಯಾಂಪ್ಶೈರ್
ಜೂನ್ 20: ಪಾಕಿಸ್ತಾನ vs ಕ್ವಾಲಿಫೈಯರ್, ಹ್ಯಾಂಪ್ಶೈರ್
ಜೂನ್ 20: ಇಂಗ್ಲೆಂಡ್ vs ಕ್ವಾಲಿಫೈಯರ್, ಹೆಡಿಂಗ್ಲಿ
ಜೂನ್ 21: ವೆಸ್ಟ್ ಇಂಡೀಸ್ vs ಶ್ರೀಲಂಕಾ, ಬ್ರಿಸ್ಟಲ್ ಕೌಂಟಿ ಮೈದಾನ
ಜೂನ್ 21: ದಕ್ಷಿಣ ಆಫ್ರಿಕಾ vs ಭಾರತ, ಓಲ್ಡ್ ಟ್ರಾಫರ್ಡ್
ಜೂನ್ 23: ನ್ಯೂಜಿಲೆಂಡ್ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ
ಜೂನ್ 23: ಶ್ರೀಲಂಕಾ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ
ಜೂನ್ 23: ಆಸ್ಟ್ರೇಲಿಯಾ vs ಪಾಕಿಸ್ತಾನ, ಹೆಡಿಂಗ್ಲಿ
ಜೂನ್ 24: ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ಲಾರ್ಡ್ಸ್
ಜೂನ್ 25: ಭಾರತ vs ಕ್ವಾಲಿಫೈಯರ್, ಓಲ್ಡ್ ಟ್ರಾಫರ್ಡ್
ಜೂನ್ 25: ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ
ಜೂನ್ 26: ಶ್ರೀಲಂಕಾ vs ಕ್ವಾಲಿಫೈಯರ್, ಓಲ್ಡ್ ಟ್ರಾಫರ್ಡ್
ಜೂನ್ 27: ಪಾಕಿಸ್ತಾನ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ
ಜೂನ್ 27: ವೆಸ್ಟ್ ಇಂಡೀಸ್ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ
ಶನಿವಾರ ಜೂನ್ 27: ಇಂಗ್ಲೆಂಡ್ v ನ್ಯೂಜಿಲೆಂಡ್, ದಿ ಓವಲ್
ಜೂನ್ 28: ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್, ಲಾರ್ಡ್ಸ್ ಕ್ರಿಕೆಟ್ ಮೈದಾನ
ಜೂನ್ 28: ಆಸ್ಟ್ರೇಲಿಯಾ vs ಭಾರತ, ಲಾರ್ಡ್ಸ್ ಕ್ರಿಕೆಟ್ ಮೈದಾನ
ಜೂನ್ 30: ಸೆಮಿಫೈನಲ್ 1, ದಿ ಓವಲ್
ಜುಲೈ 2: ಸೆಮಿಫೈನಲ್ 2, ದಿ ಓವಲ್
ಜುಲೈ 5: ಫೈನಲ್, ಲಾರ್ಡ್ಸ್ ಕ್ರಿಕೆಟ್ ಮೈದಾನ
[ad_2]
Source link