
ಜೂನ್ 18:* ರಾಜ್ಯ ಸರಕಾರಿ ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳಲ್ಲಿ ಒದಗಿಸುವ “ಸಂಬಳ ಪ್ಯಾಕೇಜ್”ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು ಮತ್ತು ಆಯ್ಕೆ ಮಾಡಿಕೊಳ್ಳುವ ಕಾರ್ಯವು ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಅವರ ಸಹಕಾರದಲ್ಲಿ ಶೇ.76 ರಷ್ಟು ಸಾಧನೆ ಯಾಗಿದೆ. ಜಿಲ್ಲೆಯ ಸುಮಾರು 15301 ಸರಕಾರಿ ನೌಕರರು ಇಲ್ಲಿಯವರೆಗೆ ಸಂಬಳ ಪ್ಯಾಕೇಜ್ ಖಾತೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲೆಯ ಸರಕಾರಿ ನೌಕರರ ಮತ್ತು ಅವರ ಕುಟುಂಬದವರ ಹಿತರಕ್ಷಣೆ ದೃಷ್ಟಿಯಿಂದ ಇದೊಂದು ಮಹತ್ವದ ಯೋಜನೆಯಾಗಿದೆ. ಸರಕಾರಿ ಯೋಜನೆ, ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಹಾಗೂ ಅನೇಕ ಒತ್ತಡ, ಆಯಾಸಗಳ ಮದ್ಯದಲ್ಲಿಯೂ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ನೌಕರ ಸ್ನೇಹಿ ಆಡಳಿತ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.ಈಗಾಗಲ್ಲೇ ಜಿಲ್ಲಾ ಮಾಹಿತಿ ಕೇಂದ್ರದಿಂದ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಚ್.ಆರ್.ಎಂ.ಎಸ್. ಹೊಂದಿರುವ ಸುಮಾರು 22,000 ಸರಕಾರಿ ನೌಕರರ ಮಾಹಿತಿಯನ್ನು ಜಿಲ್ಲಾ ಅಗ್ರಣೀಯ ಬ್ಯಾಂಕ್ಗೆ ನೀಡಲಾಗಿತ್ತು. ಅದರಲ್ಲಿ ಇಲಾಖೆ ಅಧಿಕಾರಿಗಳು ಸ್ಪಂದಿಸಿದಂತೆ 16000 ಜಿಲ್ಲಾ ಸರ್ಕಾರಿ ಉದ್ಯೋಗಿಗಳು ಸ್ಯಾಲರಿ ಪ್ಯಾಕೆಜ್ಗೆ ಅರ್ಹರಾಗಿರುತ್ತಾರೆ. ಈಗಾಗಲೇ ಎಸ್ಬಿಐ ನಲ್ಲಿ 10182, ಕೆನರಾ ಬ್ಯಾಂಕ್ 2650, ಬ್ಯಾಂಕ್ ಆಫ್ ಬರೋಡಾ ದಲ್ಲಿ 2469 ಖಾತೆಗಳನ್ನು ಪರಿವರ್ತಿಸಲಾಗಿದೆ. ಉಳಿದ ಖಾತೆಗಳನ್ನು ಆದಷ್ಟು ಬೇಗ ಪರಿವರ್ತಿಸಲಾಗುವುದು. ಕೆಲವು ಸರಕಾರಿ ನೌಕರರು ಖಾಸಗಿ ಬ್ಯಾಂಕ್ಗಳಲ್ಲಿ ವೇತನ ಪಾವತಿ ಖಾತೆ ಹೊಂದಿದ್ದು, ಅವರು ಸಹ ಸರಕಾರಿ ಬ್ಯಾಂಕ್ಗಳಿಗೆ ತಮ್ಮ ವೇತನ ಖಾತೆಗಳನ್ನು ಬದಲಾಯಿಸಿಕೊಂಡರೆ ಅವರಿಗೂ ಅನುಕೂಲವಾಗುತ್ತದೆ. ಕೆಲವು ಸರಕಾರಿ ನೌಕರರ ವೇತನ ಪಾವತಿ ಖಾತೆಗಳನ್ನು ಬ್ಯಾಂಕ್ನಿಂದ ಬ್ಯಾಂಕ್ಗೆ ಬದಲಾವಣೆ ಮಾಡುವಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು, ಅಂತಹ ಅಧಿಕಾರಿ, ಸಿಬ್ಬಂದಿಗಳು ತಮ್ಮ ಬ್ಯಾಂಕ್ಗಳಿಗೆ ಭೇಟಿ ನೀಡಿ, ಶೀಘ್ರವಾಗಿ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.ರಾಜ್ಯ ಸರಕಾರಿ ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳಲ್ಲಿ ಒದಗಿಸುವ “ಸಂಬಳ ಪ್ಯಾಕೇಜ್”ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು ಮತ್ತು ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೆ ಕಡ್ಡಾಯಗೊಳಿಸಿ, ಈಗಾಗಲೇ ಆದೇಶಿಸಲಾಗಿದೆ. ಜಿಲ್ಲೆಯಲ್ಲಿನ ಪ್ರತಿ ಸರಕಾರಿ ನೌಕರ ಸಂಬಳ ಪ್ಯಾಕೇಜ್ ಖಾತೆ ಹೊಂದಿ, ಅದರ ಪ್ರಯೋಜನ ಪಡೆಯಬೇಕು. ಆದ್ದರಿಂದ ಜಿಲ್ಲೆಯ ಎಲ್ಲ ಇಲಾಖೆಗಳು ಜಿಲ್ಲಾ ಮುಖ್ಯಸ್ಥರು ತಮ್ಮ ಇಲಾಖೆಯ ಜಿಲ್ಲಾ, ತಾಲೂಕು, ಗ್ರಾಮಮಟ್ಟದಲ್ಲಿರುವ ಡಿ.ಡಿ.ಓ ಗಳ ಮೂಲಕ ಪ್ರತಿ ನೌಕರನ ವೇತನ ಪಾವತಿ ಖಾತೆ ಸಂಬಳ ಪ್ಯಾಕೇಜ್ ಖಾತೆ ಆಗಿರುವದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅವರ ವೇತನ ಖಾತೆಯು ಸಂಬಳ ವೇತನ ಖಾತೆ ಆಗಿರದಿದ್ದಲ್ಲಿ ತಾವೇ ಖುದ್ದು ಮುತುವರ್ಜಿ, ಜವಾಬ್ದಾರಿ ವಹಿಸಿ ಮಾಡಿಸಬೇಕು. ಪ್ರತಿ ಸರಕಾರಿ ನೌಕರನಿಗೆ ಸಂಬಳ ಪ್ಯಾಕೇಜ್ ಖಾತೆ ಮತ್ತು ಪಿ.ಎಂ.ಜೆ.ಜೆ.ಬಿ.ವೈ ಹಾಗೂ ಪಿ.ಎಂ.ಎಸ್.ಬಿ.ವೈ ವಿಮೆ ಮಾಡಿಸಿರುವ ಬಗ್ಗೆ ಈಗಾಗಲೇ ಜ್ಞಾಪನಾ ಪತ್ರ ಕಳುಹಿಸಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಪೆÇಲೀಸ್ ವೇತನ ಪ್ಯಾಕೇಜ್ ಖಾತೆಗಳ ಸೌಲಭ್ಯ ನೀಡಲಾಗುತ್ತಿದ್ದು. ಇತ್ತೀಚಿಗೆ ಬೆಳಗಾವಿಯಲ್ಲಿ ಪೆÇಲೀಸ್ ಪ್ಯಾಕೇಜ್ ಖಾತೆ ಹೊಂದಿದ್ದ ಹುಬ್ಬಳ್ಳಿ ನಿವಾಸಿ ಆಗಿದ್ದ ಪೆÇಲೀಸ್ ಸಿಬ್ಬಂದಿ ಮರಣ ಹೊಂದಿದ್ದು. ಆ ಪೆÇಲೀಸ್ ಕುಟುಂಬಕ್ಕೆ 70 ಲಕ್ಷ ರೂಪಾಯಿ ಬ್ಯಾಂಕ್ ಆಫ್ ಬರೋಡ ವಿತರಿಸಿದೆ. ಇನ್ನು ಹೆಚ್ಚಿನ ಪೆÇಲೀಸ್ ಪ್ಯಾಕೇಜ್ ಖಾತೆಗಳನ್ನು ತೆರೆಯಲು ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರು ಆಸಕ್ತಿವಹಿಸಿದ್ದು, ಇಲಾಖೆ ಮುಖ್ಯಸ್ಥರು ಅವರಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
