[ad_1]
ಬೆಂಗಳೂರು: 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಬೆನ್ನಲ್ಲೇ ಜೂ. 4ರಂದು ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಕಾಲ್ತುಳಿತ ಸಂಭವಿಸಿದ (Bengaluru Stampede) 11 ಮಂದಿ ಅಸುನೀಗಿದ್ದರು. ಇದಾಗಿ ಸುಮಾರು 3 ವಾರಗಳ ನಂತರ ಇದೀಗ ಕರ್ನಾಟಕ ಸರ್ಕಾರ ಜನ ಸಂದಣಿ ನಿರ್ವಹಣೆ ಕುರಿತು ನಿಯಮ ಜಾರಿಗೆ ತರಲು ಮುಂದಾಗಿದೆ. ಅದರ ಪ್ರಕಾರ ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾಗುವ ಆಯೋಜಕರಿಗೆ 3 ವರ್ಷ ಜೈಲು, 50,000 ರೂ. ದಂಡ ವಿಧಿಸಲು ಅವಕಾಶವಿದೆ.
[ad_2]
Source link