[ad_1]
ಲೀಡ್ಸ್: ರಿಷಭ್ ಪಂತ್ (134 ರನ್) ಅವರ ಶತಕದ ಹೊರತಾಗಿಯೂ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದ (IND vs ENG) ಎರಡನೇ ದಿನ ಜಾಶ್ ಟಂಗ್ (86ಕ್ಕೆ 4) ಮತ್ತು ಬೆನ್ ಸ್ಟೋಕ್ಸ್ (66ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿತು. ಇದರ ಪರಿಣಾಮ ಟೀಮ್ ಇಂಡಿಯಾ (India) ಪ್ರಥಮ ಇನಿಂಗ್ಸ್ನಲ್ಲಿ 500ಗಡಿ ದಾಟುವಲ್ಲಿ ವಿಫಲವಾಯಿತು. 113 ಓವರ್ಗಳಿಗೆ ಭಾರತ ತಂಡ 471 ರನ್ಗಳಿಗೆ ಆಲ್ಔಟ್ ಆಯಿತು. ಮೊದಲನೇ ದಿನ ಬೌಲಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್ (England), ಎರಡನೇ ದಿನ ಕೇವಲ 41 ರನ್ಗಳ ಅಂತರದಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿತು.
[ad_2]
Source link