ಬೆಂಗಳೂರು: ರಾಮೆನ್ ನೂಡಲ್ಸ್ (Ramen Noodles) ತ್ವರಿತ (Quick), ರುಚಿಕರ ಮತ್ತು ತೃಪ್ತಿಕರ ಆಹಾರವಾಗಿ ಜನಪ್ರಿಯವಾಗಿದೆ. ಒಂಟಿಯಾಗಿರುವವರಿಗೆ ಅಥವಾ ಕೆಲಸಕ್ಕೆ ತಯಾರಾಗುವ ಧಾವಂತದಲ್ಲಿ, 10 ನಿಮಿಷದಲ್ಲಿ ತಯಾರಾಗುವ ಈ ಆಹಾರ ಅನುಕೂಲಕರವೆನಿಸುತ್ತದೆ. ಆದರೆ, ಇತ್ತೀಚಿನ ವೈರಲ್ ವಿಡಿಯೋವೊಂದು (Viral Video) ಈ ಜನಪ್ರಿಯ ತಿಂಡಿಯ ಬಗ್ಗೆ ಜನರಿಗೆ ಆಘಾತ ಉಂಟುಮಾಡಿದೆ
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ರಾಮೆನ್ ನೂಡಲ್ಸ್ ಪ್ಯಾಕೆಟ್ನ ಹಿಂಭಾಗದಲ್ಲಿ ಮುದ್ರಿತವಾದ ಎಚ್ಚರಿಕೆಯ ಲೇಬಲ್ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಲೇಬಲ್ನಲ್ಲಿ “ಎಚ್ಚರಿಕೆ: ಕ್ಯಾನ್ಸರ್ ಮತ್ತು ಸಂತಾನೋತ್ಪತ್ತಿ ಹಾನಿ” ಎಂದು ಬರೆಯಲಾಗಿದೆ. ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ, ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ವೈರಲಾಗಿರುವ ವಿಡಿಯೊ ಇಲ್ಲಿದೆ
ಮತ್ತೊಬ್ಬರು, “ಪ್ರತಿದಿನ ಖಾರದ ಆಹಾರ ಸೇವಿಸುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. 3-4 ತಿಂಗಳಿಗೊಮ್ಮೆ ಸಾಕು” ಎಂದಿದ್ದಾರೆ. “ಎಲ್ಲವನ್ನೂ ಅತಿಯಾಗಿ ಸೇವಿಸಿದರೆ ಹಾನಿಯಾಗುತ್ತದೆ. ವರ್ಷಕ್ಕೆ 6 ಬಾರಿ ಸೇವಿಸುತ್ತೇನೆ, ಆದರೆ ಇದು ತುಂಬಾ ಖಾರವಾಗಿರುತ್ತದೆ” ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಪೌಷ್ಟಿಕಾಂಶ ತಜ್ಞ ಕಾರಾ ಹಾರ್ಬ್ಸ್ಟ್ರೀಟ್ ಹೇಳುವಂತೆ, “ಪ್ಯಾಕೇಜ್ಡ್ ರಾಮೆನ್ ನೂಡಲ್ಸ್ ರುಚಿಗಾಗಿ ಸೋಡಿಯಂ ಮೇಲೆ ಹೆಚ್ಚು ಅವಲಂಬಿತವಾಗಿವೆ” ಯುಎಸ್ ಆಹಾರ ಮತ್ತು ಔಷಧ ಆಡಳಿತದ ಪ್ರಕಾರ, ರಾಮೆನ್ನ ಫ್ಲೇವರ್ ಪ್ಯಾಕೆಟ್ಗಳು ದೈನಂದಿನ ಸೋಡಿಯಂ ಮೌಲ್ಯದ 90%ವರೆಗೆ ಒಳಗೊಂಡಿರುತ್ತವೆ.
ಈ ಸುದ್ದಿಯನ್ನೂ ಓದಿ: International Day of Yoga 2025: ನಟ ವಿದ್ಯುತ್ ಜಮ್ವಾಲ್ ಅದ್ಭುತ ಯೋಗ ಪ್ರದರ್ಶನ; ಮೈ ನವಿರೇಳಿಸೋ ಫೋಟೊಗಳು ವೈರಲ್!
ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ಮಾಹಿತಿಯಂತೆ, 81 ಗ್ರಾಂ ರಾಮೆನ್ ಪ್ಯಾಕೆಟ್ನಲ್ಲಿ 14 ಗ್ರಾಂ ಒಟ್ಟು ಕೊಬ್ಬು ಮತ್ತು 6.58 ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಇದೆ. ರಾಮೆನ್ ನೂಡಲ್ಸ್ನಲ್ಲಿ MSG (ಮೊನೊಸೋಡಿಯಂ ಗ್ಲೂಟಮೇಟ್) ಹೆಚ್ಚಿರುತ್ತದೆ, ಇದು ತೀವ್ರ ತಲೆನೋವು, ವಾಕರಿಕೆ, ದೌರ್ಬಲ್ಯ, ಸ್ನಾಯು ಸೆಳೆತ, ಮತ್ತು ಎದೆನೋವಿನಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ಈ ವಿಡಿಯೋ ಜನರಿಗೆ ತಮ್ಮ ಆಹಾರ ಆಯ್ಕೆಗಳ ಬಗ್ಗೆ ಮರುಚಿಂತನೆಗೆ ಒತ್ತಾಯಿಸಿದೆ.