ಮುಂಬೈ: ರಾಕಿಂಗ್ ಸ್ಟಾರ್ ಯಶ್(Actor Yash) ರಾವಣನಾಗಿ ಮಿಂಚುತ್ತಿರುವ ಬಹು ನಿರೀಕ್ಷೆಯ ರಾಮಾಯಣ ಸಿನಿಮಾದ(Ramayana Movie) ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕೋಟ್ಯಂತರ ಸಿನಿಪ್ರಿಯರಿಗೆ ಚಿತ್ರತಂಡದಿಂದ ಗುಡ್ನ್ಯೂಸ್ ಸಿಕ್ಕಿದೆ. ಇದೇ ಗುರುವಾರ ಅಂದರೆ ಜು.3ರಂದು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ರಾಮಾಯಣದ ಗ್ಲಿಮ್ಸ್ ಅಪ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ. ಈ ಬಗ್ಗೆ ಚಿತ್ರತಂಡ ಪೋಸ್ಟರ್ವೊಂದನ್ನು ರಿಲೀಸ್ ಮಾಡಿದ್ದು, ರಾಮಾಯಣದ ಭಾಗವಾಗುವ ಅವಕಾಶ ನಿಮ್ಮದಾಗಿಸಿಕೊಳ್ಳಿ: ದ ಇಂಟ್ರೊಡಕ್ಷನ್ ಸ್ಕ್ರೀನಿಂಗ್ ಎಂದು ಬರೆಯಲಾಗಿದೆ.
ಬಾಲಿವುಡ್ನ ರಾಮಾಯಣ ಚಿತ್ರದ ಫಸ್ಟ್ ಗ್ಲಿಂಪ್ಸ್ ಜುಲೈ-3 ರಂದು ರಿಲೀಸ್ ಆಗುತ್ತಿದೆ. ಆದರೆ, ಇದರಲ್ಲಿ ಅಸಲಿಗೆ ಏನು ತೋರಿಸುತ್ತಾರೆ ಅನ್ನುವ ಕುತೂಹಲವೂ ಇದೆ. ಈ ದಿನ ರಾಮಾಯಣ ಚಿತ್ರದ ಟೈಟಲ್ ಟೀಸರ್ ಮಾತ್ರ ರಿಲೀಸ್ ಆಗುತ್ತಿದೆ. ಆದರೆ, ಅದು ವಿಶೇಷವಾಗಿಯೇ ಇದೆ. ದೇಶದ ಪ್ರಮುಖ ಸಿಟಿಯ ಥಿಯೇಟರ್ನಲ್ಲಿಯೇ ಇದು ಪ್ರದರ್ಶನ ಆಗುತ್ತಿದೆ ಎನ್ನಲಾಗಿದೆ. ರಾಮಾಯಣ ಸಿನಿಮಾದ ಟೈಟಲ್ ಟೀಸರ್ ಸ್ಪೆಷಲ್ ಆಗಿದೆ. ಇದನ್ನ 3D ಅಲ್ಲಿಯೇ ತೋರಲಾಗುತ್ತಿದೆ. ಆ ದಿನ ಇಷ್ಟು ಬಿಟ್ರೆ ಬೇರೆ ಏನೂ ಇರೋದಿಲ್ಲ ಅನ್ನೋ ಸುದ್ದಿಗಳೂ ಹರಿದಾಡುತ್ತಿವೆ.
ಈ ಸುದ್ದಿಯನ್ನೂ ಓದಿ: Ramayana Movie: ಬಿಗ್ ಬಜೆಟ್ ರಾಮಾಯಣ ಸಿನಿಮಾದಲ್ಲಿ ಮತ್ತಷ್ಟು ಸ್ಟಾರ್ಸ್ ಫಿಕ್ಸ್!