
2025: ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಎರಡನೇ ಸೀಸನ್ನಲ್ಲಿ ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ತಂಡ ಭಾಗವಹಿಸುತ್ತಿದೆ. ಜುಲೈ 18 ರಿಂದ ಆಗಸ್ಟ್ 2 ರವರೆಗೆ ನಡೆಯುವ ಈ ಟೂರ್ನಿಯಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಭಾರತ ಸೆಣಸಲಿದೆ. ಶಿಖರ್ ಧವನ್, ರಾಬಿನ್ ಉತ್ತಪ್ಪ ಮುಂತಾದ ಹಲವು ಹಿರಿಯ ಆಟಗಾರರು ತಂಡದಲ್ಲಿದ್ದಾರೆ. ಭಾರತ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.ಭಾರತ ತಂಡದ ಲೆಜೆಂಡರಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ಮತ್ತೊಮ್ಮೆ ಆಟಗಾರನಾಗಿ ಕ್ರಿಕೆಟ್ ಮೈದಾನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯುವರಾಜ್ ಸಿಂಗ್ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ನ (World Championship of Legends 2025) ಎರಡನೇ ಸೀಸನ್ನಲ್ಲಿ ಇಂಡಿಯಾ ಚಾಂಪಿಯನ್ಸ್ (India Champions) ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇಂಡಿಯಾ ಚಾಂಪಿಯನ್ಸ್ ಈ ಟೂರ್ನಮೆಂಟ್ನ ಮೊದಲ ಸೀಸನ್ನ ಟ್ರೋಫಿಯನ್ನು ಗೆದ್ದಿತ್ತು. ಇದೀಗ ಎರಡನೇ ಸೀಸನ್ನಲ್ಲಿಯೂ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆಯಲ್ಲಿ ತಂಡವಿದೆ. ಈ ಟೂರ್ನಮೆಂಟ್ ಜುಲೈ 18 ರಿಂದ ಪ್ರಾರಂಭವಾಗುತ್ತಿದ್ದು, ಫೈನಲ್ ಪಂದ್ಯ ಆಗಸ್ಟ್ 2 ರಂದು ನಡೆಯಲಿದೆ. ಈ ಲೀಗ್ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ಇಂಡಿಯಾ ಚಾಂಪಿಯನ್ಸ್ ಜೊತೆಗೆ, ಪಾಕಿಸ್ತಾನ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ಇಂಗ್ಲೆಂಡ್ ಚಾಂಪಿಯನ್ಸ್ ಮತ್ತು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಸೇರಿವೆ.

ಜುಲೈ 20 ರಂದು ಪಾಕ್ ವಿರುದ್ಧ ಪಂದ್ಯಟೀಂ ಇಂಡಿಯಾ ಬಗ್ಗೆ ಹೇಳುವುದಾದರೆ, ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ. ಶಿಖರ್ ಧವನ್ ಕೂಡ ಈ ಟೂರ್ನಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಈ ಇಬ್ಬರು ಆಟಗಾರರಲ್ಲದೆ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ಗುರುಕೀರತ್ ಸಿಂಗ್ ಮಾನ್, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ಅಭಿಮನ್ಯು ಮಿಥುನ್, ವರುಣ್ ಆರೋನ್ ಮತ್ತು ಪವನ್ ನೇಗಿ ಭಾರತ ಚಾಂಪಿಯನ್ಸ್ ತಂಡದಲ್ಲಿದ್ದಾರೆ.ಜುಲೈ 20 ರಂದು ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಲೀಗ್ ಪಂದ್ಯವನ್ನು ಆಡಲಿದೆ. ಇದರ ನಂತರ, ಜುಲೈ 22 ರಂದು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಜುಲೈ 26 ರಂದು ತಂಡವು ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಸೆಣಸಲಿದೆ. ಜುಲೈ 27 ರಂದು ಇಂಗ್ಲೆಂಡ್ ಚಾಂಪಿಯನ್ಸ್ ವಿರುದ್ಧ ಟೀಂ ಇಂಡಿಯಾ ತನ್ನ ನಾಲ್ಕನೇ ಲೀಗ್ ಪಂದ್ಯವನ್ನು ಆಡಲಿದೆ. ಹಾಗೆಯೇ ಜುಲೈ 29 ರಂದು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಈ ಟೂರ್ನಿಯ ಎರಡೂ ಸೆಮಿಫೈನಲ್ ಪಂದ್ಯಗಳು ಜುಲೈ 31 ರಂದು ನಡೆಯಲಿದ್ದು, ಫೈನಲ್ ಪಂದ್ಯ ಆಗಸ್ಟ್ 2 ರಂದು ನಡೆಯಲಿದೆ.
