
ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದ ಯುವಕ ಆಕಸ್ಮಿಕ ಸಾವನ್ನಪ್ಪಿದರ ಘಟನೆ ನಡೆದಿದೆ. ಧಾರವಾಡ ನಗರದ ಶಕ್ತಿ ಕಾಲೋನಿಯಲ್ಲಿ ಇರುವಂತ ಗಂಗಾಧರ (32) ಎಂಬುವವನೇ ಮೃತಪಟ್ಟ ಯುವಕನಾಗಿದ್ದು.ಮೃತ ಯುವಕ ಗಂಗಾಧರ ಇಂಜಿನಿಯರ್ ಪದವೀಧರನಾಗಿದ್ದರು, ಕೆಎಎಸ್ ಮಾಡಲು ಧಾರವಾಡ ನಗರಕ್ಕೆ ಬಂದು ರೂಂ ಮಾಡಿಕೊಂಡು ಇದ್ದರು

. ಇನ್ನು ಮಲಗಿದಲ್ಲೇ ಸಾವನ್ನಪ್ಪಿದ್ದಾರೆ.ಕಳೆದ ಎರಡು ದಿನಗಳ ಹಿಂದೆಯೇ ಯುವಕ ಮೃತಪಟ್ಟಿದ್ದನು,ಮನೆಯಿಂದ ವಾಸನೆ ಬಂದಾಗ ಗಂಗಾಧರ ಸಾವನ್ನಪ್ಪಿದ ಬಗ್ಗೆ ಮಾಹಿತಿ ಬಂದಿದೆ.ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಶಂಕೆ ಬಾಸವಾಗಿದೆ.ಮೃತ ಗಂಗಾಧರ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನವನಾಗಿದ್ದು, ಸ್ಥಳಕ್ಕೆ ಧಾರವಾಡ ಉಪನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ,ಶವ ಜಿಲ್ಲಾ ಆಸ್ಪತ್ರೆಗೆ ರವಾನೆಸಿದ್ದಾರೆ. ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ…