[ad_1]
ಹುಬ್ಬಳ್ಳಿ: ಪಾದಚಾರಿಯೊರ್ವನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿಯೇ ಪಾದಚಾರಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಚಿಂಚಲಿ ಗ್ರಾಮದ ಸೋಮಶೇಖರ್ ಅಂಗಡಿ (48) ಎಂಬಾತನೇ ಸಾವನ್ನಪ್ಪಿದ ಪಾದಚಾರಿಯಾಗಿದ್ದು, ಮೃತರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅದರಂತೆ ಗುರುವಾರ ತಡರಾತ್ರಿ ಊಟ ಮುಗಿಸಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಗೋಕುಲ ರಸ್ತೆಯಲ್ಲಿ ಸ್ಕೋಡಾ ಕಾರ ಡಿಕ್ಕಿ ಹೊಡೆದಿದೆ. ಪರಿಣಾಮ ಸೋಮಶೇಖರ್ ಅಂಗಡಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಸ್ಥಳೀಯರು ಆಟೋದಲ್ಲಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ಆದರೆ ಮಾರ್ಗಮಧ್ಯೆದಲ್ಲಿಯೇ ಸೋಮಶೇಖರ್ ಮೃತನಾಗಿದ್ದಾನೆ.

ಇನ್ನು ಇಂದು ಮರಣೋತ್ತರ ಪರೀಕ್ಷೆ ನಡೆಸಿ ಸರ್ಕಾರಿ ಬಸ್ಸಿನಲ್ಲಿ ಚಿಂಚಲಿಗೆ ಅಧಿಕಾರಿಗಳು ಶವವನ್ನು ಕಳಿಸಿದ್ದಾರೆ. ಈ ಕುರಿತು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post ಕಿಮ್ಸ್ ಶವಾಗಾರಕ್ಕೆ ಬಂದ ಸಾರಿಗೆ ಬಸ್.. ಯಾಕೆ ಗೊತ್ತಾ?? first appeared on Karnataka Public Voice.
[ad_2]
Source link