[ad_1]

ಭದ್ರಾವತಿ: ಬಾಯ್ಲರ್ ಸ್ಫೋಟ(Boiler Blast)ಗೊಂಡು 7 ಜನರಿಗೆ ಗಾಯವಾಗಿರುವ ಘಟನೆ ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ಮಿಲ್ನಲ್ಲಿ ಗುರುವಾರ (ಡಿ. 19) ನಡೆದಿದೆ. ಸದ್ಯ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಗೊಂಡಿರುವ ರಭಸಕ್ಕೆ ರೈಸ್ಮಿಲ್ ಗೋಡೆ ಕುಸಿದಿದ್ದು, ಘಟನೆಯಿಂದ ರೈಸ್ಮಿಲ್ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಭದ್ರಾವತಿಯಲ್ಲಿ ಎಸ್.ಪಿ. ಮಿಥುನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ʼʼಗುರುವಾರ ಸಂಜೆ 6:30ರ ವೇಳೆಗೆ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. 7 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆʼʼ ಎಂದು ಹೇಳಿದ್ದಾರೆ.
ಘಟನೆ ವೇಳೆ 20ಕ್ಕೂ ಅಧಿಕ ಮಂದಿ ಅಕ್ಕಿ ಲೋಡ್ ಮಾಡುತ್ತಿದ್ದರು ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಅಕ್ಕಿ ಎಲ್ಲೆ ಹರಡಿದ್ದು, ಕಬ್ಬಿಣದ ಶೀಟುಗಳು ಹಾರಿ ಹೋಗಿವೆ. ಕೆಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಹುಡುಕಅಟ ನಡೆಯುತ್ತಿದೆ.
ಬಾಯ್ಲರ್ನ ತುಣುಕುಗಳು ಕಿ.ಮೀ.ವರೆಗೆ ಹರಡಿ ಬಿದ್ದಿವೆ ಎಂದು ಸ್ತಳೀಯರು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಪೊಲೀಸ್, ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಭೀಕರ ರಸ್ತೆ ಅಪಘಾತ; ಬೊಲೆರೋ ಡಿಕ್ಕಿಯಾಗಿ ಐವರ ದುರ್ಮರಣ
ಕೋಲಾರ: ಬೊಲೆರೋ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ದುರ್ಮರಣ ಹೊಂದಿರುವ ಘಟನೆ (Road Accident) ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್. ವಡ್ಡಹಳ್ಳಿ-ಗುಡಿಪಲ್ಲಿ ಮುಖ್ಯ ರಸ್ತೆಯಲ್ಲಿ ಬುಧವಾರ (ಡಿ. 18) ನಡೆದಿತ್ತು. ಕೋನಗುಂಟೆ ಗ್ರಾಮದ ರಾಧಪ್ಪ (45), ವೆಂಕಟರಾಮಪ್ಪ (45), ವೆಂಕಟರಾಮಪ್ಪನ ಪತ್ನಿ ಅಲುವೇಲಮ್ಮ (30) ಸೇರಿ ಐವರು ಮೃತಪಟ್ಟಿದ್ದರು. ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದೆ. ಬೈಕ್ಗಳಿಗೆ ಡಿಕ್ಕಿಯಾದ ಬಳಿಕ ಬೊಲೆರೋ ರಸ್ತೆಬದಿಗೆ ಉರುಳಿದೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[ad_2]
Source link