[ad_1]
ಚಿಕ್ಕಬಳ್ಳಾಪುರ : ಬೆಂಗಳೂರಿನ ಋಷಿ ಪ್ರಭಾಕರ್ ವಿದ್ಯಾ ಕೇಂದ್ರದ ವತಿಯಿಂದ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿ ನಾರೇಯಣ ಮಠದಲ್ಲಿ ಇಂದಿನಿAದ ಡಿಸೆಂಬರ್ ೨೦ ರಿಂದ ಡಿಸೆಂಬರ್ ೨೨ವರೆಗೆ ಮೂರು ದಿನಗಳ ಕಾಲ ವಿಶ್ವ ಹೃದಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಋಷಿ ಪ್ರಭಾಕರ್ ವಿದ್ಯಾಕೇಂದ್ರದ ಕರ್ನಾಟಕ ವಿಭಾಗೀಯ ಸಂಚಾಲಕ ಪ್ರಕಾಶ್ಜೀ ತಿಳಿಸಿದ್ದಾರೆ.
ಶ್ರೀಕ್ಷೇತ್ರ ಕೈವಾರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಋಷಿ ಪ್ರಭಾಕರ್ ವಿದ್ಯಾಕೇಂದ್ರದ ಶಾಖೆಗಳು ಇಡೀ ಭಾರತದಾದ್ಯಂತ ಇದೆ. ಈ ಶಾಖೆಗಳಲ್ಲಿ ಹಲವಾರು ಯೋಗ ಮತ್ತು ಧ್ಯಾನ ಸಾಧಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿವರ್ಷವೂ ಒಮ್ಮೆ ಇವರೆಲ್ಲರನ್ನೂ ಸೇರಿಸಿ ವಾರ್ಷಿಕ ಧ್ಯಾನ-ಯೋಗ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಕಳೆದ ಬಾರಿ ಹೈದ್ರಾಬಾದ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು.
ದಿನಾಂಕ ೨೦ ಶುಕ್ರವಾರ ಪ್ರಾತ:ಕಾಲದಿಂದಲೇ ಯೋಗ-ಧ್ಯಾನ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ಸಮ್ಮೇಳನ ದ ಉದ್ಘಾಟನಾ ಸಮಾರಂಭದಲ್ಲಿ ಆಂಧ್ರಪ್ರದೇಶ್ ತೆನಾಲಿ ಶ್ರೀವಿದ್ಯಾಪೀಠಂನ ಶ್ರೀಪ್ರಜ್ಞಾನಂದ ಸರಸ್ವತಿ ಸ್ವಾಮೀಜಿ, ಗೌರಿಗದ್ದೆ ಅವದೂತ ಶ್ರೀವಿನಯ್ ಗುರೂಜಿ, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಭಾಗವಹಿಸುವರು.
ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಡಾ||ಮಹದೇವ್ ಆರರ್ ಯೋಗಶಾಸ್ತ್ರದ ಕುರಿತಾಗಿ ಹಾಗೂ ವಿದ್ವಾಂಸರಾದ ವಾನರಾಶಿ ಬಾಲಕೃಷ್ಣ ಭಾಗವತರ್, ತತ್ವಜ್ಞಾನದ ಕುರಿತಾಗಿ, ಪ್ರವಚನಕಾರ ತಳಗವಾರ ಆನಂದ್,ಕೈವಾರ ತಾತಯ್ಯನವರ ಕುರಿತಾಗಿ ಉಪನ್ಯಾಸವನ್ನು ನೀಡಲಿದ್ದಾರೆ ಎಂದರು.

ದಿನಾ೦ಕ ೨೧ ಶನಿವಾರದಂದು ಬೆಳಿಗಿನ ಕಾರ್ಯಕ್ರಮಗಳಲ್ಲಿ ಧಾರವಾಡದ ಪ್ರಕೃತಿ ಚಿಕಿತ್ಸಕರು ಹಾಗೂ ವಾಗ್ಮಿ ಗಳಾದ ಶ್ರೀ ಬಸವಾನಂದ ಸ್ವಾಮೀಜಿ, ಬೆಂಗಳೂರು ಯಲಹಂಕದ ಶ್ರೀರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಶ್ರೀಅಭಯಾನಂದ ಸ್ವಾಮೀಜಿ, ಹೋಮಿಯೋಪತಿ ಹಿರಿಯ ಸಲಹೆಗಾರರಾದ ಪುಣೆಯ ಡಾ.ಚೇತನ ಕಿರಾದ್, ಉಪನ್ಯಾಸವನ್ನು ನೀಡುವರು. ಮಧ್ಯಾಹ್ನ ಸಂಸದರು ಹಾಗೂ ಖ್ಯಾತ ಹೃದಯತಜ್ಞರಾದ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್, ಬೆಂಗಳೂರು ಇಸ್ಕಾನ್ ಸಂಸ್ಥೆಯ ಭಕ್ತವೃಂದದಾಸ್, ಡಾ.ಅನಿಲ್ಕುಮಾರ್ ಎನ್.ಜೋಷಿ ಇತರರು ಯೋಗ-ಧ್ಯಾನದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ದಿನಾಂಕ ೨೨ ಭಾನುವಾರದಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸಾಂಸ್ಕöÈ ತಿಕ ಕಾರ್ಯಕ್ರಮಗಳಲ್ಲಿ ಕುಮಾರಿ ಅಮೃತವಲ್ಲಿ ರವರಿಂದ ವೀಣಾವಾದನ, ವಿದುಷಿ ವೈಭವಿ ಕಲ್ಯಾ ಶಶಾಂಕ್ ಜೋಡಿದಾರ್ರವರಿಂದ ಕೊಳಲುವಾದನ, ವಿದುಷಿ ಡಾ.ವೀಣಾವಾಣಿ ಅವರಿಂದ ಭರತನಾಟ್ಯ, ವಿಧೂಷಿ ರಜನಿರೆಡ್ಡಿ ಅವರಿಂದ ಗಾಯನ, ಯಕ್ಷಸಿಂಚನ ತಂಡದವರಿAದ ಯಕ್ಷಗಾನ ಪ್ರಸಂಗಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಋಷಿ ಪ್ರಭಾಕರ್ ವಿದ್ಯಾಕೇಂದ್ರದ ಟ್ರಸ್ಟಿ ಎನ್.ಗೋಪಾಲನ್, ಆಪ್ತ ಸಲಹೆಗಾರರಾದ ಮಹೇಶ್, ವಿಭಾಗೀಯ ಸಂಯೋಜಕರಾದ ಸಿ.ಎಂ.ವೆAಕಟೇಶ್ ಉಪಸ್ಥಿತರಿದ್ದರು.
[ad_2]
Source link