ವಯಸ್ಸಾದ ಮೇಲೆ ಕೈ ಕಾಲು ಹಿಡಿದುಕೊಳ್ಳುವುದು, ಮಂಡಿ ನೋವು ಅಥವಾ ಕೈಕಾಲುಗಳ ಗಂಟು ನೋವು ಸಮಸ್ಯೆ ಕಾಣಿಸಿಕೊಳ್ಳುವುದು ನಮಗೆಲ್ಲಾ ಗೊತ್ತಿರುವ ವಿಚಾರ.ಗಂಟು ನೋವು ಬಂದರೆ ಆಗ ದೈನಂದಿನ ಚಟುವಟಿಕೆಗಳ ಮೇಲೆ ಇದು ಪರಿಣಾಮ ಬೀರುವುದು. ಹೀಗಾಗಿ ಇದನ್ನು ಆರಂಭದಲ್ಲೇ ಪತ್ತೆ ಮಾಡಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಅದರ ಲಕ್ಷಣಗಳನ್ನು ತಿಳಿಯುವುದು ಅಗತ್ಯ.
ದೇಹದಲ್ಲಿ ತೂಕ ಹೆಚ್ಚಾಗಿ ಬೊಜ್ಜು ಆವರಿಸಿಕೊಂಡ ವೇಳೆ ಅದರ ಸಂಪೂರ್ಣ ಭಾರವು ಗಂಟುಗಳ ಮೇಲೆ ಬಿದ್ದು, ಅದರಿಂದ ಸಮಸ್ಯೆಯಾಗುವುದು ಇದೆ. ಹೀಗಾಗಿ ದೇಹದ ತೂಕ ಸಮತೋಲನದಲ್ಲಿಟ್ಟುಕೊಳ್ಳುವುದು ಅತೀ ಅಗತ್ಯ. ಇಂದಿನ ದಿನಗಳಲ್ಲಿ ಗಂಟು ನೋವಿನ ಸಮಸ್ಯೆಯು ಹೆಚ್ಚಾಗುತ್ತಿದ್ದು, ಇದಕ್ಕೆ ಜೀವನಶೈಲಿ ಕೂಡ ಪ್ರಮುಖ ಕಾರಣವಾಗಿದೆ.
ಗಂಟುನೋವಿನ ಸಮಸ್ಯೆಯಿದ್ದರೆ, ಆಗ ಇದರಿಂದ ನಿತ್ಯದ ಚಟುವಟಿಕೆಗಳನ್ನು ಮಾಡಲು ಕಷ್ಟವಾಗಬಹುದು. ನಿರಂತರ ನೋವು, ಊತ ಮತ್ತು ಚಲನೆಗೆ ಪರಿಣಾಮವಾದರೆ ಆಗ ಇದು ಸಂಧಿವಾತ, ಕಾರ್ಟಿಲೆಜ್ ಹಾನಿ, ಮೆನಿಸ್ಕಸ್ ಅಥವಾ ಅಸ್ಥಿರಜ್ಜು ಗಾಯಗಳ ಕಾರಣದಿಂದ ಇರಬಹುದು. ಈ ಎಲ್ಲಾ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಗಂಟು ನೋವಿನ ಸಮಸ್ಯೆಯ ಲಕ್ಷಣಗಳನ್ನು ತಿಳಿದರೆ, ಆಗ ಅದಕ್ಕೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೂಡ ನೀಡಬಹುದು. ಹೀಗಾಗಿ ಗಳನ್ನು ತಿಳಿದುಕೊಂಡರೆ, ಆಗ ಅದು ತೀವ್ರ ಸ್ವರೂಪಕ್ಕೆ ತಿರುಗುವುದನ್ನು ಕಡಿಮೆ ಮಾಡಬಹುದು.