[ad_1]
ಟೆಲ್ ಅವೀವ್:
ಪಶ್ಚಿಮ ಏಷ್ಯಾದಲ್ಲಿ ಹಮಾಸ್ ಬಂಡುಕೋರ ಪ್ರಾಬಲ್ಯದ ರಾಷ್ಟ್ರಗಳು ಹಾಗೂ ಇಸ್ರೇಲ್ ನಡುವೆ ಕಳೆದ 15 ತಿಂಗಳಿನಿಂದ ನಡೆಯುತ್ತಿದ್ದ ಗಾಜಾ ಯುದ್ಧ ಅಂತ್ಯಗೊಳಿಸುವ ಗುರಿಯೊಂದಿಗೆ ಹಮಾಸ್ ಶನಿವಾರ ಕದನ ವಿರಾಮ ಒಪ್ಪಂದಡಿ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದೆ.
ನಾಲ್ವರು ಸೈನಿಕರಾದ ಕರೀನಾ ಅರಿವ್, ಡೇನಿಯೆಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಅವರನ್ನು ಗಾಜಾದಲ್ಲಿ ರೆಡ್ಕ್ರಾಸ್ಗೆ ಹಸ್ತಾಂತರಿಸಲಾಗಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆಗಳು, ನಾಲ್ವರು ಇಸ್ರೇಲಿ ಒತ್ತೆಯಾಳುಗಳನ್ನು ವರ್ಗಾಯಿಸಲಾಗಿದೆ. ಗಾಜಾ ಪಟ್ಟಿಯಲ್ಲಿರುವ IDF ಮತ್ತು ISA ಪಡೆಗಳ ಕಡೆಗೆ ಅವರು ಹೋಗುತ್ತಿದ್ದಾರೆ ಎಂದು ರೆಡ್ ಕ್ರಾಸ್ ಮಾಹಿತಿ ನೀಡಿರುವುದಾಗಿ ತಿಳಿಸಿದೆ. ಇಸ್ರೇಲ್-ಗಾಜಾ ಯುದ್ಧ ಅಂತ್ಯ?: ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕರಡು ಒಪ್ಪಂದಕ್ಕೆ ಹಮಾಸ್ ಸಮ್ಮತಿ
[ad_2]
Source link