[ad_1]
<
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಲ್ಲಿ ಪ್ರಸಾರವಾಗುತ್ತಿರುವ, ಕಿಚ್ಚ ಸುದೀಪ್ (Kichcha Sudeepa) ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಆರಂಭವಾಗಿದೆ (BBK 11 Final). ಕೊನೆಯ ಹಂತಕ್ಕೆ ಬಂದಿದ್ದ ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್ ಕಿಶನ್ ಹಾಗೂ ಮೋಕ್ಷಿತಾ ಪೈ ಪೈಕಿ ಇದೀಗ ಉಗ್ರಂ ಮಂಜು ಹೊರ ಬಿದ್ದಿದ್ದಾರೆ.
ಕೊನೆಯ ಹಂತಕ್ಕೆ ಒಟ್ಟು 6 ಮಂದಿ ಆಯ್ಕೆಯಾಗಿದ್ದರು. ಈ ಪೈಕಿ ಶನಿವಾರದ ಸಂಚಿಕೆಯಲ್ಲಿ ಗೀತಾ ಗೌಡ ಎಲಿಮಿನೇಟ್ ಆಗಿದ್ದರು. ಇದೀಗ ಉಗ್ರಂ ಮಂಜು ತಮ್ಮ ಆಟ ಮುಗಿಸಿದ್ದಾರೆ. ಇನ್ನು ಉಳಿದಿರುವ ಸ್ಪರ್ಧಿಗಳ ಪೈಕಿ ಯಾರು ಚಾಂಪಿಯನ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಭಾನುವಾರದ ಸಂಚಿಕೆ ಸುದೀಪ್ ಅವರ ಲವಲವಿಕೆಯ ನಿರೂಪಣೆಯೊಂದಿಗೆ ಆರಂಭವಾಯಿತು. ಈ ಸೀಸನ್ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳೆಲ್ಲ ಆಗಮಿಸಿದ್ದರು. ಪ್ರತಿಯೊಬ್ಬರನ್ನೂ ಮಾತನಾಡಿಸಿದ ಸುದೀಪ್ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಡ್ಯಾನ್ಸರ್ ಆಗಮಿಸಿ ಉಗ್ರಂ ಮಂಜು ಅವರನ್ನು ಕರೆದುಕೊಂಡು ಹೋಗಿದ್ದು, ಈ ಮೂಲಕ ಇಂದಿನ ಮೊದಲ ಎಲಿಮಿನೇಷನ್ ನಡೆಯಿತು.
]]>
[ad_2]
Source link