[ad_1]
ವಾಷಿಂಗ್ಟನ್:
ಪಿಎಸ್ ಎ ನಿರ್ವಹಣೆಯ ಅಮೆರಿಕನ್ ಏರ್ಲೈನ್ಸ್ ವಾಣಿಜ್ಯ ವಿಮಾನ ನಿನ್ನೆ ರಾತ್ರಿ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಿಲಿಟರಿ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಪೊಟೊಮ್ಯಾಕ್ ನದಿಗೆ ಬಿದ್ದು ವಿಮಾನದಲ್ಲಿದ್ದ ಎಲ್ಲಾ 64 ಮಂದಿ ಮೃತಪಟ್ಟಿರುವ ಶಂಕೆಯಿದೆ, ಈಗಾಗಲೇ ಇಬ್ಬರ ಮೃತದೇಹಗಳನ್ನು ರಕ್ಷಣಾ ಕಾರ್ಯ ತಂಡ ಹೊರತೆಗೆದಿದೆ.
ನದಿಯಿಂದ ಇಬ್ಬರ ಶವಗಳನ್ನು ಹೊರತೆಗೆಯಲಾಗಿದ್ದು, ಅಧಿಕಾರಿಗಳು ಇನ್ನುಳಿದವರಿಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ಡಬ್ಲ್ಯೂಬಿಎಎಲ್ ಟಿವಿ ವರದಿ ಮಾಡಿದೆ.
ಅಮೆರಿಕನ್ ಏರ್ಲೈನ್ಸ್ ಅಡಿಯಲ್ಲಿ ಹಾರುತ್ತಿದ್ದ ಪಿಎಸ್ಎ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಪ್ರಾದೇಶಿಕ ಜೆಟ್ ಮತ್ತು ಸಿಕೋರ್ಸ್ಕಿ ಹೆಚ್ -60 ಆರ್ಮಿ ಬ್ಲ್ಯಾಕ್ಹಾಕ್ ಹೆಲಿಕಾಪ್ಟರ್ ಡಿಕ್ಕಿ ಹೊಡೆದಿವೆ. ಇವೆರಡೂ ವಿಮಾನ ನಿಲ್ದಾಣದ ಬಳಿ ಪತನಗೊಂಡಿವೆ. ವಿಮಾನದಲ್ಲಿದ್ದ 64 ಜನರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ರಾತ್ರಿಯಿಂದ ಕೆಲಸ ಮಾಡುತ್ತಿವೆ. ಈ ಹಂತದಲ್ಲಿ ಬದುಕುಳಿದವರು ಪತ್ತೆಯಾಗಿಲ್ಲ ಎಂದು ಎರಡು ಕಾನೂನು ಜಾರಿ ಮೂಲಗಳು ಮತ್ತು ಪರಿಸ್ಥಿತಿ ಬಗ್ಗೆ ತಿಳಿದಿರುವ ಮೂಲಗಳು ದೃಢಪಡಿಸಿವೆ.
[ad_2]
Source link